SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | SHIVAMOGGA RAIN | ಮಳೆಯ ಆರ್ಭಟದ ನಡುವೆ ತುಂಬಿ ಹರಿಯುತ್ತಿದ್ದ ಹಳ್ಳವನ್ನ ದಾಟಲು ಹೋದ ವ್ಯಕ್ತಿಯೊಬ್ಬರ ಬೈಕ್ ಸಮೇತ ನೀರು ಪಾಲಾಗಿದ್ದಾರೆ.
ಇವತ್ತು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಶಿವಮೊಗ್ಗ ತಾಲ್ಲೂಕು ಮುದುವಾಲ ಬಳಿ ಇರುವ ಕೊಂಡಜ್ಜಿ ಹಳ್ಳದಲ್ಲಿ ವ್ಯಕ್ತಿ ನೀರು ಪಾಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ.
ನಿನ್ನೆ ಸುರಿದ ಭಾರಿ ಮಳೆಗೆ ಕೊಂಡಜ್ಜಿ ಹಳ್ಳ ತುಂಬಿ ಹರಿಯುತ್ತಿತ್ತು. ಹಾಗಾಗಿ ಹಳ್ಳ ದಾಟದಂತೆ ಸ್ಥಳೀಯ ಪೊಲೀಸರು ಹಾಗೂ ಗ್ರಾಮಸ್ಥರು ಸೊಪ್ಪು ಅಡ್ಡ ಇಟ್ಟು ಎಚ್ಚರಿಸಿದ್ದರು.
ಇವತ್ತು ಬೆಳಗ್ಗೆ ನೀರಿನ ಹರಿವು ಕಡಿಮೆಯಾಗಿದೆ ಎಂದುಕೊಂಡು ಚಿನ್ನಿಕಟ್ಟೆ ಗ್ರಾಮದ ಇಕ್ಬಾಲ್ ಎಂಬಾತ ಹಳ್ಳ ದಾಟಲು ಮುಂದಾಗಿದ್ದಾನೆ. ಈ ವೇಳೆ ಟ್ರಾಕ್ಟರ್ ಚಾಲಕರು ಎಚ್ಚರಿಸಿದ್ದರು. ಆದರೂ ದಾಟು ಭರವಸೆಯಲ್ಲಿ ಹಳ್ಳದಾಟಲು ಹೋದ ಇಕ್ಬಾಲ್ ಬೈಕ್ ಸಮೇತ ನೀರುಪಾಲಾಗಿದ್ದಾನೆ.
ಸದ್ಯ ಈತನಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸ್ತಿದ್ದಾರೆ.
SUMMARY | resident of Chinnikatte, who had gone to cross the overflowing Kondajji river amidst heavy rains, drowned along with his bike.
KEYWORDS | Chinnikatte Kondajji halla, heavy rains, drowned along with his bike