SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 21, 2024 shimoga power cut
ಶಿವಮೊಗ್ಗದಲ್ಲಿ ಇತ್ತೀಚೆಗೆ ನಾಪತ್ತೆ ಪ್ರಕರಣಗಳು ಮತ್ತೆ ಹೆಚ್ಚಾಗಿವೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಿವಾಸಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಗಳು ಪ್ಯಾಕ್ಟರಿ ಕೆಲಸಕ್ಕೆ ಎಂದು ಹೋದವರು ನಾಪತ್ತೆಯಾಗಿದ್ದರು. ಅವ ಪತ್ತೆಗಾಗಿ ಶಿವಮೊಗ್ಗ ರೈಲ್ವೆ ಪೊಲೀಸರು ಪ್ರಕಟಣೆ ನೀಡಿದ್ದರು. ಇದೀಗ ಆಕೆಯ ಮೃತದೇಹ ಬಿದರೆ ಬಳಿಯಲ್ಲಿ ಭದ್ರಾ ಚಾನಲ್ನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ
ಕಳೆದ ಸೆಪ್ಟೆಂಬರ್ 19 ರಂದು ಈಕೆ ನಾಪತ್ತೆಯಾಗಿದ್ದು, ಈಕೆಯ ಬ್ಯಾಗ್, ಚಪ್ಪಲಿ ಹಾಗೂ ಐಡಿ ಕಾರ್ಡ್ ಲಕ್ಷ್ಮೀಪುರ ರೈಲ್ವೆ ಬಿಡ್ಜ್ ಬಳಿಯಲ್ಲಿ ಪತ್ತೆಯಾಗಿತ್ತು, ಈ ಸಂಬಂಧ ವಾರ್ತಾ ಇಲಾಖೆಯ ಮೂಲಕ ರೈಲ್ವೆ ಪೊಲೀಸ್ ಇಲಾಖೆ ಪ್ರಕಟಣೆಯನ್ನ ಸಹ ನೀಡಿತ್ತು. ಪ್ರಕಟಣೆ ಹೊರಬಿದ್ದ ಬೆನ್ನಲ್ಲೆ ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ದೂ.ಸಂ.: 08182-222974/ 9480802124

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ