SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 2, 2025
ಕರ್ನಾಟಕ ಲೋಕಾ ಸೇವಾ ಆಯೋಗವು ಈ ಹಿಂದೆ ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ್ದ ದಿನಾಂಕವನ್ನು ಇದೀಗ ಮುಂದೂಡಿದೆ. ಇದೀಗ ಅರ್ಜಿ ಸಲ್ಲಿಸಲು ನೂತನ ದಿನಾಂಕವನ್ನು ಜನವರಿ 3 ರಿಂದ ಫೆಬ್ರವರಿ 1 ರ ವರೆಗೆ ನಿಗದಿಪಡಿಸಲಾಗಿದೆ.
ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗ ಕೃಷಿ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 7 ರಿಂದ ನವಂಬರ್ 7 ರ ವರೆಗೆ ದಿನಾಂಕವನ್ನು ನಿಗದಿಪಡಿಸಿತ್ತು. ಆದರೆ ಈಗ ಅಕ್ಟೋಬರ್ 18 , 2024 ರಿಂದ ಕ್ರೀಡೆಯಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳಿಗೂ ರಾಜ್ಯ ಸಿವಿಲ್ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಶೇಕಡಾ 2ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಕೃಷಿ ಇಲಾಖೆಯಲ್ಲಿ ಹುದ್ದೆ ನೀಡಬೇಕು ಎಂಬ ಕಾನೂನು ಬಂದಿದ್ದರಿಂದ ಅರ್ಜಿ ಪ್ರಕ್ರಿಯೆನ್ನು ಮುಂದೂಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನಾಂಕ 03-01-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-02-2025
SUMMARY | The Karnataka Public Service Commission (KPSC) has postponed the last date for submission of applications for the posts of Agriculture Officer and Assistant Agriculture Officer in the Agriculture Department
KEYWORDS | Karnataka Public Service Commission, applications, Agriculture,