SHIVAMOGGA | MALENADUTODAY NEWS | ಮಲೆನಾಡು ಟುಡೆ Nov 13, 2024
ನಿನ್ನೆ ದಿನ ಹಲವಡೆ ಲೋಕಾಯುಕ್ತ ದಾಳಿ ನಡೆದಿದೆ. ಅದೇ ರೀತಿಯಲ್ಲಿ ಹಾವೇರಿ ಜಿಲ್ಲೆ ಹಿರೇಕೇರೂರಿನ ಗ್ರಾಮೀಣ ಕುಡಿಯುವ ನೀರು ಮತ್ತು ಒಳ ಚರಂಡಿ ಇಲಾಖೆ ಸಹಾಯಕ ಎಂಜಿನಿಯರ್ ಕಾಶಿನಾಥ್ ಬುದ್ಧಪ್ಪ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.
ಈ ವೇಳೆ ಮನೆಯಲ್ಲಿದ್ದ ಅಧಿಕಾರಿ ಮನೆಯ ಕಿಟಿಕಿಯಿಂದ 9 ಲಕ್ಷ ರೂಪಾಯಿಯನ್ನು ಹೊರಗೆ ಬಿಸಾಡಿರುವ ಘಟನೆ ನಡೆದಿದೆ.
ಲೋಕಾಯುಕ್ತ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆಘಾತಕ್ಕೆ ಒಳಗಾದ ಕಾಶಿನಾಥ್ ಬುದ್ದಪ್ಪ ಭಜಂತ್ರಿ ಕಂತೆ ಕಂತೆ ಹಣವನ್ನ ಕಿಟಕಿಯಿಂದ ಎಸದಿದ್ದಾರೆ.
ಇದನ್ನ ಗಮನಿಸಿದ ಅಧಿಕಾರಿಗಳು ಹೊರಗೆ ಬಿಸಾಡಿದ ನಗದನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಒಟ್ಟಾರೆ ಇವರ 20 ಲಕ್ಷನಗದನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದಾರೆ.
SUMMARY | During a raid by the Lokayukta police in Haveri district, an officer threw Rs 9 lakh through a window
KEYWORDS | Lokayukta police raid in Haveri district, officer threw Rs 9 lakh through a window