SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 23, 2025
2019 ರಲ್ಲಿ ರಿಲೀಸ್ ಆದ ಚಿತ್ರಗಳಿಗೆ ರಾಜ್ಯಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಕಿಚ್ಚ ಸುದೀಪ್ರ ಪೈಲ್ವಾನ್ ಚಿತ್ರದ ನಟನೆಗೆ ಅತ್ಯುತ್ತಮ ನಟರೆಂದು ರಾಜ್ಯ ಪ್ರಶಸ್ತಿ ನೀಡಲಾಗಿದೆ. ಹಾಗೆಯೇ ನಟಿಯರ ವಿಭಾಗದಲ್ಲಿ ತ್ರಯಂಬಕಂ ಸಿನಿಮಾದಲ್ಲಿ ನಟಿಸಿದ ಅನುಪಮ ಗೌಡಗೆ ಅತ್ಯುತ್ತಮ ನಟಿಯೆಂಬ ರಾಜ್ಯ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪಡೆದ ಸಿನಿಮಾಗಳ ವಿವಿರ ಇಲ್ಲಿದೆ
ಶೇಷಾದ್ರಿ ನಿರ್ದೇಶನ ಮಾಡಿದ ಮೋಹನದಾಸ ಸಿನಿಮಾಗೆ ಮೊದಲನೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ. ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮಾಕ್ಟೇಲ್ ಸಿನಿಮಾಗೆ 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ. ಹಾಗೆಯೇ ಅರ್ಘ್ಯಂ ಚಿತ್ರಕ್ಕೆ 3ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಒಟ್ಟಿಗೆ ಕನ್ನಡದಲ್ಲಿ ಮೂರು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ದೊರಕಿದೆ. ‘ಕನ್ನೇರಿ’ ಚಿತ್ರಕ್ಕೆ ‘ವಿಶೇಷ ಸಾಮಾಜಿಕ ಕಾಳಜಿಯ ಸಿನಿಮಾ’ ಪ್ರಶಸ್ತಿ ನೀಡಲಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾಗೆ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ನೀಡಲಾಗಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದಲ್ಲಿನ ಅಭಿನಯಕ್ಕೆ ತಬಲಾ ನಾಣಿ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅನುಷಾ ಕೃಷ್ಣ ಅವರು ‘ಬ್ರಾಹ್ಮಿ’ ಚಿತ್ರದಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.
ಮಿಂಚುಹುಳು ಚಿತ್ರಕ್ಕಾಗಿ ಮಾಸ್ಟರ್ ಪ್ರೀತಂ ಅವರಿಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಸಿಕ್ಕಿದೆ. ದರ್ಶನ್ ನಟನೆಯ ಯಜಮಾನ ಚಿತ್ರಕ್ಕಾಗಿ ವಿ. ಹರಿಕೃಷ್ಣ ಅವರು ‘ಅತ್ಯುತ್ತಮ ಸಂಗೀತ ನಿರ್ದೇಶನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಸುಗಂಧಿ’ ಸಿನಿಮಾದಲ್ಲಿನ ಅಭಿನಯಕ್ಕೆ ಬೇಬಿ ವೈಷ್ಣವಿ ಅಡಿಗ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ನೀಡಲಾಗಿದೆ.
SUMMARY | The state awards were announced for the films released in 2019 and the state award was given for best actor for his performance in Kichcha Sudeep’s Pailwaan.
KEYWORDS | state awards, Kichcha Sudeep, best actor, Pailwaan,