SHIVAMOGGA | MALENADUTODAY NEWS | ಮಲೆನಾಡು ಟುಡೆ Jan 4, 2025
ಕಾರ್ಪೊರೇಟರ್ ಒಬ್ಬರ ಕಿರುಕುಳ ಆರೋಪ ಸಂಬಂದ ವಿಷದ ಬಾಟಲಿ ಹಿಡಿದು ವಿಡಿಯೋ ಮಾಡಿದ ಶಿವಮೊಗ್ಗ ಪಾಲಿಕೆಯ ನೌಕರರನ ಪರವಾಗಿ ಇವತ್ತು ಶಿವಮೊಗ್ಗ ನಗರ ಪಾಲಿಕೆಯಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸ್ತಿದ್ದಾರೆ.
ಪಾಲಿಕೆಯ ಆವರಣದಲ್ಲಿಯೇ ಇವತ್ತು ಒಗ್ಗೂಡಿದ ನೌಕರರು ಶಾಮಿಯಾನ ಕಟ್ಟಿ ಅದರ ನೆರಳಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಅಷ್ಟೆಅಲ್ಲದೆ ತಮಗಾಗುತ್ತಿರುವ ಅನ್ಯಾಯಗಳನ್ನ ಖಂಡಿಸಿದ ಕಾರ್ಮಿಕರು ದಲಿತ ನೌಕರ ಮೂರ್ತಿಯ ಪರಿಸ್ಥಿತಿಗೆ ಕಾರಣವಾದ ಕಾರ್ಪೊರೇಟರ್ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಅವರ ವಿರುದ್ಧ ಕೇಸ್ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದರು
ಪಾಲಿಕೆ ಕಚೇರಿ ಆವರಣದಲ್ಲಿ ನೌಕರರು ಧರಣಿ ನಡೆಸಿದರು. ಮಾಜಿ ಕಾರ್ಪೋರೇಟರ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತತ್ತಕ್ಷಣವೇ ನೌಕರನಿಗೆ ಕಿರುಕುಳ ನೀಡಿದ ಮಾಜಿ ಕಾರ್ಪೋರೇಟರ್ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು. ಮೇಲಾಗಿ ನ್ಯಾಯ ಸಿಗುವರೆಗೂ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಇನ್ನೂ ಇದೇ ವೇಳೆ ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಎಸ್ಎನ್ ಚೆನ್ನಬಸಪ್ಪ ಪೌರ ಕಾರ್ಮಿಕರ ಜೊತೆ ಸಮಾಲೋಚನೆ ನಡೆಸಿದರು. ಇನ್ನೊಂದೆಡೆ ಶಿವಮೊಗ್ಗ ಪಾಲಿಕೆಯ ಮಾಜಿ ಸದಸ್ಯ ಹೆಚ್ಸಿ ಯೋಗೇಶ್ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಮೂರ್ತಿಯವರನ್ನ ಭೇಟಿಮಾಡಿದರಷ್ಟೆ ಅಲ್ಲದೆ ಪ್ರತಿಭಟನಾ ಸ್ಥಳಕ್ಕೆ ಬಂದು ನೌಕರರ ಜೊತೆ ಚರ್ಚಿಸಿದರು. ನಾಯಕರ ಭರವಸೆಗಳ ನಡುವೆ ಸ್ಥಳಕ್ಕೆ ಬಂದ ಎಸ್ಪಿ ಮಿಥುನ್ ಕುಮಾರ್ ಸಹ ಪೌರಕಾರ್ಮಿಕರ ಮನವಿಯನ್ನು ಪಡೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
SUMMARY | Protest by civic workers at Shivamogga city Corporation
KEY WORDS | civic workers Protest , Shivamogga cityl Corporation