SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಶಿವಮೊಗ್ಗ | ದಾಖಲೆ ಪರಿಶೀಲನೆಗಾಗಿ ವಾಹನಗಳನ್ನ ತಡೆದು ನಿಲ್ಲಿಸುವ ಟ್ರಾಫಿಕ್ ಪೊಲೀಸರ ಮೇಲೆಯೇ ವಾಹನ ಹತ್ತಿಸುವುದು, ಬ್ಯಾನೆಟ್ ಮೇಲೆ ಬೀಳಿಸಿ ಎಳೇದೊಯ್ಯುವಂತಹ ದೃಶ್ಯಗಳು ಉತ್ತರ ಭಾರತದಲ್ಲಿ ಕಾಣ ಸಿಗುತ್ತಿತ್ತು. ಎಕ್ಸ್‌ಕ್ಲ್ಯೂಸಿವ್ ವಿಷಯ ಅಂದರೆ, ಇಂತಹದ್ದೊಂದು ದೃಶ್ಯ ಶಿವಮೊಗ್ಗ ಸಿಟಿಯಲ್ಲಿಯೇ ಕಾಣಸಿಕ್ಕಿದೆ.
ಶಿವಮೊಗ್ಗ ಟ್ರಾಫಿಕ್ ಪೊಲೀಸರು ಎಲ್ಲಂದರಲ್ಲಿ ರಸೀದಿ ಮೀಟರ್ ಹಿಡಿದು ಫೈನ್ ಹಾಕ್ತಿದ್ದಾರೆ. ಇದು ಜನರಿಗೆ ಕಿರಿಕಿರಿ ಮಾಡುತ್ತಿದೆ ನಿಜವೆ. ಆದಾಗ್ಯು ಒಬ್ಬ ಟ್ರಾಫಿಕ್ ಸಿಬ್ಬಂದಿಯನ್ನ ಕಾರಿನ ಚಾಲಕನೊಬ್ಬ ತನ್ನ ಕಾರಿನ ಬ್ಯಾನೆಟ್ ಮೇಲೆ ಬೀಳಿಸಿ ನೂರು ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದ ಘಟನೆ ನಿಜಕ್ಕೂ ಖಂಡನೀಯವಾದದು.
ಏನಿದು ಘಟನೆ
ಟ್ರಾಫಿಕ್ ಸಿಬ್ಬಂದಿಯನ್ನ ಬ್ಯಾನೆಟ್ ಮೇಲೆ, ಎಳೆದೊಯ್ದ ಘಟನೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿಯಲ್ಲಿ ನಡೆದಿದೆ. ಇವತ್ತು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಹ್ಯಾದ್ರಿ ಕಾಲೇಜಿನ ಬಳಿಯಲ್ಲಿ ಟ್ರಾಫಿಕ್ ಸಿಬ್ಬಂದಿ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದರು. ಅದೇ ವೇಳೆ ಭದ್ರಾವತಿ ಕಡೆಯಿಂದ ಬಂದ ಕಾರೊಂದನ್ನ ಟ್ರಾಫಿಕ್ ಸಿಬ್ಬಂದಿಯೊಬ್ಬ ತಡೆದಿದ್ದಾರೆ. ಈ ವೇಳೆ ಕಾರು ನಿಲ್ಲಿಸಿದ ಕಾರಿನ ಚಾಲಕ ಪೊಲೀಸ್ ಪೇದೆಯ ಮೇಲೆಯೇ ಕಾರು ಹತ್ತಿಸುವ ರೀತಿ ವರ್ತಿಸಿದ್ದಾನೆ. ಪದೇ ಪದೇ ಹಿಂದೆ ಸರಿದು, ಕಾರನ್ನ ನಿಲ್ಲಿಸುವಂತೆ ಸೂಚಿಸಿದರು ಸಹ ಕಾರಿನ ಚಾಲಕ ತನ್ನ ಅಹಂಕಾರವನ್ನ ಪ್ರದರ್ಶಿಸಿದ್ದಾನೆ.
ಕಾರು ಚಾಲಕನ ವರ್ತನೆ ನೋಡಿ ಅಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲು ಆರಂಭಿಸಿದ್ದಾರೆ. ಅದೇ ವೇಳೆ ಅತ್ತ ಟ್ರಾಫಿಕ್ ಸಿಬ್ಬಂದಿಯನ್ನ ಕಾರು ಚಲಾಯಿಸುತ್ತಾ ತಳ್ಳಿಕೊಂಡು ಬಂದ ವ್ಯಕ್ತಿ, ಆನಂತರ ಇದ್ದಕ್ಕಿದ್ದಂತೆ ಕಾರಿನ ಸ್ಪೀಡ್ ಜಾಸ್ತಿ ಮಾಡಿದ್ದಾನೆ. ಈ ವೇಳೆ ಟ್ರಾಫಿಕ್ ಸಿಬ್ಬಂದಿ ಬ್ಯಾನೆಟ್ ಮೇಲೆ ಬಿದ್ದಿದ್ದಾರೆ. ಅದಕ್ಕೂ ಕೇರ್ ಮಾಡದೇ ಕಾರು ಚಾಲಕ ಸುಮಾರು ನೂರು ಮೀಟರ್‌ಗೂ ಹೆಚ್ಚು ದೂರ ಅವರನ್ನ ಎಳೆದೊಯ್ದಿದ್ದಾನೆ.
ಅದೃಷ್ಟಕ್ಕೆ ಟ್ರಾಫಿಕ್ ಸಿಬ್ಬಂದಿಯ ಜೀವಕ್ಕೆ ಅಪಾಯವಾಗಿಲ್ಲ ಎನ್ನಲಾಗಿದೆ. ಕಾರು ಚಲಾಯಿಸುತ್ತಿದ್ದಿದ್ದು ಯಾರು? ಮಾಲೀಕನೆ? ಆತನ ಉದ್ದೇಶವೇನಾಗಿತ್ತು ಇನ್ನಷ್ಟೆ ಗೊತ್ತಾಗಬೇಕಿದೆ.
SUMMARY |Shivamogga: In a shocking incident, a traffic police man was dragged on the bonnet of his car near Sahyadri College in Shivamogga. Shivamogga Traffic Police
KEYWORDS | Shivamogga, In a shocking incident, a traffic police man was dragged on the bonnet, Sahyadri College in Shivamogga, Shivamogga Traffic Police