SHIVAMOGGA | MALENADUTODAY NEWS | ಮಲೆನಾಡು ಟುಡೆ Oct 22, 2024
ಶಿವಮೊಗ್ಗ ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರಲ್ಲಿ Turbidity ಹೆಚ್ಚಾಗಿರುವ ಈಗಾಗಲೇ ವರದಿಯಾಗಿತ್ತು. ಈ ಸಂಬಂಧ ಇದೀಗ ಶಾಸಕ ಎಸ್‌ಎನ್ ಚನ್ನಬಸಪ್ಪ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕುಡಿಯುವ ನೀರಿನ ಪೂರೈಕೆಯಲ್ಲಿನ ಲೋಪದೋಷಗಳನ್ನ ಇದೇ ಡಿಸೆಂಬರ್ 31 ರೊಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಲುವಾಗಿ ಕೃಷ್ಣರಾಜ ಜಲ ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿದ್ದ ಅವರು, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ಜೊತೆ ಸಮಾಲೋಚಿಸಿದರು. ಅಲ್ಲದೆ ನೀರು ಶುದ್ದೀಕರಣದ ಘಟಕದಲ್ಲಿ ಖುದ್ದು ನೀರಿನ ಶುದ್ಧತೆ ಪರೀಕ್ಷಿಸಿದ ಅವರು, ಶುದ್ದೀಕರಣ ಘಟಕದಲ್ಲಿ ಸುಸಜ್ಜಿತ ಪ್ರಯೋಗಾಲಯ, ಸಲಕರಣೆ, ನುರಿತ ತಜ್ಞರು ಮತ್ತು ಮೂರು ಹಂತದ ಟೆಸ್ಟಿಂಗ್‌ನ ಕೊರತೆ ಇದೆ ಎಂದರು
ಅಲ್ಲದೆ ನೀರಿನ ಸಂಬಂಧಿತ ಸಮಸ್ಯೆಗಳು ಹಾಗೂ ಇತರೆ ಯಾವುದೇ ಸಮಸ್ಯೆಗಳಿದ್ದರೆ ಶಿವಮೊಗ್ಗದ ನಾಗರಿಕರಿಗೆ ಮೀಸಲಾದ ನಮ್ಮ ವಾಟ್ಸಪ್ ಹೆಲ್ಸ್‌ಲೈನ್ +91 – 9019901177 ಸಂಪರ್ಕಿಸಿ ಅಥವಾ ಕರ್ತವ್ಯ ಭವನಕ್ಕೆ ಭೇಟಿ ನೀಡಬಹುದು ಎಂದು ತಿಳಿಸಿದರು
SUMMARY | Mla S.N. Channabasappa visited the Krishnaraja Water Purification Plant and instructed the officials to rectify the loopholes in the water supply by Dec. 31.
KEYWORDS | Mla S.N.Channabasappa, Krishnaraja Water Purification Plant, loopholes in the water supply ,