SHIVAMOGGA | MALENADUTODAY NEWS | ಮಲೆನಾಡು ಟುಡೆ Feb 23, 2025
ಶಿವಮೊಗ್ಗ ರಾಜಕಾರಣ ಮತ್ತೊಂದು ಮಜಲಿನತ್ತ. ಬದಲಾಗುತ್ತಿರುವ ತಲೆಮಾರಿನಲ್ಲಿ, ರಾಜಕಾರಣದಲ್ಲಿ ಎರಡನೇ ಸ್ಥರದ ನಾಯಕರು ಪವರ್ ಸೆಂಟರ್ನಲ್ಲಿ ಪವರ್ ಮ್ಯಾನ್ಗಳಿಗೆ ಟಕ್ಕರ್ ಕೊಡುತ್ತಿದ್ದಾರೆ. ಈ ಪೈಕಿ, ಇನ್ಮುಂದೆ ಇದಕ್ಕೆ ನನ್ನದು ಹೊಸ ಲೆಕ್ಕ ಎನ್ನುತ್ತಿದ್ದಾರೆ ಕುಮಾರ್ ಬಂಗಾರಪ್ಪ. ಏನಿದು ಏತಕ್ಕೆ ಇದು ಎಂಬುದಕ್ಕೆ ಇಲ್ಲಿದೆ ವಿವರ
ಶಿವಮೊಗ್ಗ ರಾಜ್ಯ ರಾಜಕೀಯದ ಶಕ್ತಿ ಕೇಂದ್ರ. ಈ ಮಾತಿಗೆ ರಾಜಕಾರಣದಲ್ಲಿನ ಶಿವಮೊಗ್ಗದ ಘಟಾನುಘಟಿಗಳೇ ಸಾಕ್ಷಿ. ಅದರಲ್ಲಿಯು ಸಾರೆಕೊಪ್ಪ ಬಂಗಾರಪ್ಪ ಬಿಎಸ್ ಯಡಿಯೂರಪ್ಪರ ನಡುವಿನ ರಾಜಕೀಯ ಪೈಪೋಟಿ ಇಡೀ ರಾಜ್ಯದಲ್ಲಿ ಪ್ರದರ್ಶನಗೊಂಡಿರುವುದು ಎಲ್ಲರಿಗೂ ಗೊತ್ತಿರುವಂತದ್ದೆ. ಈ ಪೈಪೋಟಿಯಲ್ಲಿ ಇದೀಗ ಹೊಸ ಎಂಟ್ರಿ ತೆಗೆದುಕೊಂಡಿರುವುದು ಕುಮಾರ್ ಬಂಗಾರಪ್ಪ. ಅತ್ತ ಕಾಂಗ್ರೆಸ್ನಲ್ಲಿ ತಮ್ಮ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರಷ್ಟೆ ಅಲ್ಲದೆ ಶಿವಮೊಗ್ಗದಲ್ಲಿ ಸ್ಟ್ರಾಂಗ್ ಹೋಲ್ಡ್ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಸದ್ಯ ಅವರದ್ದೆ ಕೈ ನಡೆಯುತ್ತಿದೆ. ಇತ್ತ ಸೊರಬದಲ್ಲಿ ತಮ್ಮನಿಂದ ಸೋತ ಕುಮಾರ್ ಬಂಗಾರಪ್ಪ ಕೆಲವು ದಿನ ಸೈಲೆಂಟ್ ಆಗಿದ್ದರು. ಆದರೆ ಇದೀಗ ಹೈಫರ್ ಆಕ್ಟೀವ್ ಆಗಿದ್ದಾರೆ. ಬಿಜೆಪಿ ಶುದ್ಧಿಕರಣ ಚಳವಳಿಗೆ ತಮ್ಮದೆ ಮನೆಯನ್ನು ವೇದಿಕೆಯಾಗಿ ಒದಗಿಸಿರುವ ಅವರ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಸೆಂಟರ್ ಪಾಯಿಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಿನ್ನೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯೇ ಸಾಕ್ಷಿ. ಯುತ್ನಾಳಗೆ ಬಂದ ಹೈಕಮಾಂಡ್ ನೋಟಿಸಿನಿಂದ ಮಾತು ಆರಂಭಿಸಿದ ಅವರು ರಾಜ್ಯಾಧ್ಯಕ್ಷ ಸ್ಥಾನ ಬದಲಾಗಬೇಕು, ಆ ಸ್ಥಾನ ನನಗೆ ನೀಡಿದರೂ ಸೈ ಒಟ್ನಲ್ಲಿ ಚುನಾವಣೆ ಫಿಕ್ಸ್ ಎಂದಿದ್ದಾರೆ.
ಹೀಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ ವಿರುದ್ಧ ತಮ್ಮ ಕಡೆಯಿಂದ ನಾಮಪತ್ರ ಸಲ್ಲಿಸುವುದು ನಿಕ್ಕಿ ಎಂದಿರುವ ಅವರು ಈ ಸಲ ರಾಜ್ಯಾಧ್ಯಕ್ಷರ ಬದಲಾವಣೆ ನೂರಕ್ಕೆ ನೂರು ಆಗುತ್ತದೆ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯಕ್ಕೆ ಬರಬೇಕು, ಚುನಾವಣೆ ವೇಳಾಪಟ್ಟಿ ನಿಗದಿಯಾಗಬೇಕು, ತದನಂತರ ಮುಂದಿನ ವಿಚಾರ ತಿಳಿಯುವುದು ಎಂದಿದ್ದಾರೆ. ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಚುನಾವಣೆ ನಡೆಯುವರೆಗೂ ನಮ್ಮ ವಾದ ಇದೇ ರೀತಿಯಿರುತ್ತದೆ ಅಂತಾ ಬಿವೈ ವಿಜಯೇಂದ್ರರಿಗೆ ನೇರ ಸವಾಲು ಹಾಕಿದ್ದಾರೆ.
ತಮ್ಮನಿಗೆ ಸವಾಲ್ ಅಣ್ಣನಿಗೆ ಸಾಥ್
ಶಾಸಕರಾಗಿದ್ದಾಗಿನಿಂದಲೂ ತಮ್ಮ ವೈಯಕ್ತಿಕ ಪ್ರತಿಷ್ಟೆ ವಿಚಾರದಲ್ಲಿ ರಾಜಿಮಾಡಿಕೊಳ್ಳದ ಕುಮಾರ್ ಬಂಗಾರಪ್ಪ, ಆಗಾಗ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಳ್ತಾನೆ ಇದ್ದರು. ಆಗೆಲ್ಲಾ ಸಂಸದ ಬಿವೈ ರಾಘವೇಂದ್ರ ಖುದ್ದು ಕುಮಾರ್ ಬಂಗಾರಪ್ಪನವರ ಮನೆಗೆ ಹೋಗಿ ಸಮಾಧಾನ ಮಾಡುತ್ತಿದ್ದರು. ಆನಂತರ ಶಾಸಕ ಸ್ಥಾನದ ಚುನಾವಣೆ ವೇಳೆ ನಮೋ ವೇದಿಕೆ ಕುಮಾರ್ ಬಂಗಾರಪ್ಪರನ್ನ ಬಿಡದೇ ಕಾಡಿತು, ಸೋಲಿಗೂ ಒಂಚೂರು ಕಾರಣವಾಯ್ತು. ಆನಂತರ ಸೈಲೆಂಟ್ ಆದ ಕುಮಾರ್ ಬಂಗಾರಪ್ಪ, ಎಂಪಿ ಎಲೆಕ್ಷನ್ ಪ್ರಚಾರಕ್ಕೆ ಬಿಜೆಪಿ ಪರವಾಗಿ ಬರೋದಿಲ್ಲ ಎಂದೇ ಯೋಚಿಸಲಾಗಿತ್ತು. ಅಲ್ಲದೆ ಕುಮಾರ್ ಬಂಗಾರಪ್ಪ ಕಾಂಗ್ರೆಸ್ಗೆ ಬರುತ್ತಾರೆ, ಅವರೇ ಬಿವೈಆರ್ ವಿರುದ್ಧ ನಿಲ್ಲುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅಂತಹದ್ದೊಂದು ಪ್ರಯತ್ನ ಮಧು ಬಂಗಾರಪ್ಪರವರ ಹಠ ಸಾಧನೆಯಿಂದ ನಿಂತಿತು ಎನ್ನುತ್ತದೆ ರಾಜಕಾರಣ.
ಈ ಮಧ್ಯೆ ದಿಢೀರ್ ಅಲರ್ಟ್ ಆದ ಕುಮಾರ್ ಬಂಗಾರಪ್ಪ ರಾಷ್ಟ್ರೀಯ ನಾಯಕರು ಶಿವಮೊಗ್ಗಕ್ಕೆ ಬರಲು ಆರಂಭಿಸುತ್ತಲೇ ಅವರೊಂದಿಗೆ ಸರ್ಪ್ರೈಸ್ ಎಂಟ್ರಿ ಕೊಟ್ಟರು. ಬಿವೈ ರಾಘವೇಂದ್ರರ ಬೆನ್ನಿಗೆ ನಿಂತು ಜೈ ಎಂದು ಬಿಡಿ ಎಂದ ಅವರು, ಸಚಿವ ಮಧು ಬಂಗಾರಪ್ಪರವರ ಕ್ಷೇತ್ರದಲ್ಲಿ, ಸಹೋದರಿ ಗೀತಾ ಶಿವರಾಜ್ ಕುಮಾರ್ ವಿರುದ್ಧ ಬಿವೈಆರ್ಗೆ ದೊಡ್ಡ ಲೀಡ್ ತಂದುಕೊಟ್ರು. ಇದು ಕುಮಾರ್ ಬಂಗಾರಪ್ಪರವರ ಪವರ್ ಎಂಬ ಮಾತು ಆ ಹೊತ್ತಲ್ಲಿ ಕೇಳಿದ್ದು ನಿಜ. ಹೀಗೇ ಬಿವೈಆರ್ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದ ಕುಮಾರ್ ಬಂಗಾರಪ್ಪ ಇದೀಗ ರಾಘವೇಂದ್ರರ ಸಹೋದರ ಬಿವೈ ವಿಜಯೇಂದ್ರ ವಿರುದ್ಧ ತೊಡೆ ತಟ್ಟಿದ್ದಾರೆ.
ಮೊದಲಿನಿಂದಲೂ ಬಿವೈ ವಿಜಯೇಂದ್ರರ ಜೊತೆ ಅಷ್ಟಾಗಿ ವೇದಿಕೆ ಹಂಚಿಕೊಳ್ಳದ ಕುಮಾರ್ ಬಂಗಾರಪ್ಪರಿಗೆ ಬಿಜೆಪಿಯ ದೊಡ್ಡ ಬಣವೊಂದು ನೇರವಾಗಿ ಸಪೋರ್ಟ್ ಮಾಡುತ್ತಿದೆ. ಆ ಶಕ್ತಿಯಿಂದಲೇ ಕುಮಾರ್ ಬಂಗಾರಪ್ಪ ವಿಜಯೇಂದ್ರರ ಬದಲಾವಣೆ ಕಾಲ ಬಂದಿದೆ ಎನ್ನುತ್ತಿದ್ದಾರೆ. ಅವರ ಈ ನಡೆ ಶಿವಮೊಗ್ಗದಲ್ಲಿ ಸಾಕಷ್ಟು ಕತೂಹಲ ಮೂಡಿಸ್ತಿದೆ. ವಿಜಯೇಂದ್ರರ ಬದಲಾವಣೆ ಬಗ್ಗೆ ಮಾತ್ರ ಮಾತನಾಡುವ ಕುಮಾರ್ ಬಂಗಾರಪ್ಪ, ಯತ್ನಾಳರ ರೀತಿಯಲ್ಲಿ ಬಿಎಸ್ವೈ ಅಥವಾ ಬಿವೈಆರ್ ಬಗ್ಗೆ ಪ್ರಸ್ತಾಪಿಸ್ತಲ್ಲ ಎಂಬುದೆ ವಿಶೇಷ.
SUMMARY | ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಬಿಎಸ್ ಯಡಿಯೂರಪ್ಪ, ಸಾರೇಕೊಪ್ಪ ಬಂಗಾರಪ್ಪ, ಎಸ್ ಬಂಗಾರಪ್ಪ, ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ , ಬಿಜೆಪಿ ರಾಜ್ಯಾಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ , Kumar Bangarappa, Madhu Bangarappa, BS Yeddyurappa, Sarekoppa Bangarappa, S Bangarappa, BY Raghavendra, BY Vijayendra, BJP State President Basanagowda Patil Yatnal.
KEY WORDS | ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಬಿಎಸ್ ಯಡಿಯೂರಪ್ಪ, ಸಾರೇಕೊಪ್ಪ ಬಂಗಾರಪ್ಪ, ಎಸ್ ಬಂಗಾರಪ್ಪ, ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ , ಬಿಜೆಪಿ ರಾಜ್ಯಾಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ , Kumar Bangarappa, Madhu Bangarappa, BS Yeddyurappa, Sarekoppa Bangarappa, S Bangarappa, BY Raghavendra, BY Vijayendra, BJP State President Basanagowda Patil Yatnal.