SHIVAMOGGA | MALENADUTODAY NEWS | ಮಲೆನಾಡು ಟುಡೆ Nov 7, 2024
ಬೆಂಗಳೂರು | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ನಿವಾಸಿ ಹಮ್ಜಾ ಬಂಧನದ ಬಗ್ಗೆ ಇದೀಗ ಬೆಂಗಳೂರು ಪೊಲೀಸ್ ಇಲಾಖೆಯಿಂದ ಪೂರ್ತಿ ವಿವರ ಹೊರಬಿದ್ದಿದೆ. ಇತ್ತಿಚೆಗೆ ತೀರ್ಥಹಳ್ಳಿಯಲ್ಲಿ ಕಮ್ಮರಡಿ ಹನೀಫಾನ ಸಹೋದರ ಹಮ್ಜಾ ಬಂಧನದ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಆ ಪ್ರಕರಣದಲ್ಲಿ ಪೊಲೀಸರು ಕೇವಲ ಚಿನ್ನವನ್ನಷ್ಟೆ ಜಪ್ತಿ ಮಾಡದೇ, ಅಪಾಯಕಾರಿ ಪಿಸ್ತೂಲ್ವೊಂದನ್ನ ಸಹ ಸೀಜ್ ಮಾಡಿದ್ದಾರೆ.
ಮಾಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದೇವಸ್ಥಾನವೊಂದರಲ್ಲಿ ಕಳ್ಳತನ ನಡೆದಿತ್ತು. ಆ ಪ್ರಕರಣದಲ್ಲಿ ಬರೋಬ್ಬರಿ 5 ಕೆಜಿ ಚಿನ್ನ ಕಳುವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು ಮ್ಯಾರಥಾನ್ ಕಾರ್ಯಾಚರಣೆ ನಡೆಸಿದ್ದರು. ಈ ನಡುವೆ ಕದ್ದ ದುಡ್ಡಿನಲ್ಲಿ ತೀರ್ಥಹಳ್ಳಿಯ ಹಮ್ಜಾ ಹಾಗೂ ಕಡೂರು ಸಾದಿಕ್ ಬಹ್ರೇನ್ ದೇಶಕ್ಕೆ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದರು. ನಕಲಿ ಪಾಸ್ಪೋರ್ಟ್ಗಳನ್ನ ಸಹ ಸಿದ್ದ ಮಾಡಿಕೊಂಡಿದ್ದ ಆರೋಪಿಗಳು ಮುಂಬೈ ಏರ್ಪೋರ್ಟ್ ಬಳಿ ಪೊಲೀಸರ ಕೈಗೆ ಸೆರೆ ಸಿಕ್ಕಿದ್ದರು.
ಆನಂತರ ತೀರ್ಥಹಳ್ಳಿಗೆ ಬಂದ ಅಧಿಕಾರಿಗಳ ತಂಡ ಚಿನ್ನಾಭರಣ ಜಪ್ತಿ ಮಾಡಿಕೊಂಡು ಹೋಗಿತ್ತು. ಇದೀಗ ಒಟ್ಟಾರೆ 3 ಕೋಟಿ 60 ಲಕ್ಷ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ. ಅಲ್ಲದೆ 1 ಗನ್ ಹಾಗೂ 5 ಜೀವಂತ ಗುಂಡು, ಹಾಗೂ 11,49,000 ನಗದು ಜಪ್ತಿ ಮಾಡಲಾಗಿದೆ ಮಾಡಿದ್ದಾರೆ
ಈ ಪ್ರಕರಣ ತೀವ್ರ ಕುತೂಹಲ ಮೂಡಿಸಿದ್ದು, ಆರೋಪಿಗಳ ಬಳಿ ಗನ್ ಇರುವುದು ಇನ್ನಷ್ಟು ಅಚ್ಚರಿಗೆ ಕಾರಣವಾಗಿದೆ. ಇನ್ನಷ್ಟು ಪ್ರಕರಣಗಳಲ್ಲಿ ಆರೋಪಿಯಾಗಿರುವ ಇಬ್ಬರನ್ನು ಸಹ ಪೊಲೀಸರು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.

SUMMARY | Hamza, a resident of Thirthahalli in Shivamogga district, has been arrested by the Bengaluru police. Recently, Malnad Today had reported about the arrest of Hamza, brother of Kammaradi Haneefa, in Thirthahalli. In that case, the police not only seized the gold but also seized a dangerous pistol.
KEYWORDS | Hamza, a resident of Thirthahalli Shivamogga district, Bengaluru police, malenadutoday had reported about the arrest of Hamza, brother of Kammaradi Haneefa, in Thirthahalli,