SHIVAMOGGA | MALENADUTODAY NEWS | ಮಲೆನಾಡು ಟುಡೆ Feb 10, 2025
ಶಿವಮೊಗ್ಗದ ಆಯನೂರು ಭಾಗದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಕಾಡಿನೊಳಗೆ ಬೆರೆಸಿದರೂ ಸಹ ಅವು ಮತ್ತೆ ವಾಪಸ್ ಬರುತ್ತಿದ್ದು ಊರಿನ ತೋಟ ಮನೆಗಳ ಬಳಿಯಲ್ಲಿ ಓಡಾಡಿಕೊಂಡು ಬೆಳೆ ನಾಶ ಮಾಡುತ್ತಿವೆ ಅಲ್ಲದೆ ಜನರಲ್ಲಿ ಭಯ ಹುಟ್ಟಿಸುತ್ತಿದೆ. ನಿನ್ನೆ ಸಹ ಸಿರಿಗೆರೆಯಲ್ಲಿ ಐದು ಕಾಡಾನೆಗಳ ಗುಂಪು ಓಡಾಡಿದ್ದು ಅಡಿಕೆ ಸಸಿಗಳನ್ನು ನಾಶಪಡಿಸಿವೆ. ರೈತರ ಹೊಲದಲ್ಲಿ ಜನರಿಗೆ ಹೆದರಿ, ಓಡುತ್ತಿರುವ ಕಾಡಾನೆಗಳು ಎತ್ತ ಸಾಗುತ್ತಿವೆ ಎಂಬುದು ರೈತರ ಅರವಿಗೆ ಬರುತ್ತಿಲ್ಲ. ಹೀಗಾಗಿ ತೋಟಗಳಿಗೆ ಹೋಗಲು ಸಹ ರೈತರು ಭಯ ಪಡುತ್ತಿದ್ದಾರೆ.
ಸಿರಿಗೆರೆಯ ಕಾಡಾನೆಯದ್ದೆ ಸಮಸ್ಯೆ
ನಾಲ್ಕು ದೊಡ್ಡಾನೆ , ಒಂದು ಸಣ್ಣಾನೆಯ ಗುಂಪು, ಈ ಹಿಂದೆ ಸಿರಿಗೆರೆಯಲ್ಲಿ ಕಾಣಿಸಿದ್ದಷ್ಟೆ ಅಲ್ಲದೆ ಕೆಲವು ಮನೆಗಳ ಹೆಂಚು ಸಹ ಒಡೆದು ಹಾಕಿದ್ದವು. ಆನಂತರ ಅವುಗಳನ್ನ ಹೆದ್ದಾರಿ ದಾಟಿಸಿ ಕಾಡಿಗೆ ಅಟ್ಟಲಾಗಿತ್ತು. ಆದರೆ ಇದೀಗ ಮತ್ತೆ ಆನೆ ಗುಂಪು ಗದ್ದೆಗಳಲ್ಲಿ ಹಾಜರಾತಿ ಹಾಕಿವೆ ಅಲ್ಲದೆ ರಾತ್ರಿ ತೋಟಗಳಿಗೆ ನುಗ್ಗಿ ಬಾಳೆ ಅಡಿಕೆ ಗಿಡಗಳನ್ನ ನೆಲಸಮ ಮಾಡುತ್ತಿವೆ.
ಇನ್ನೂ ಆನೆಗಳ ಉಪಟಳಕ್ಕೆ ಮೇಲಾಧಿಕಾರಿಗಳ ಸೂಕ್ತ ಮಾರ್ಗದರ್ಶನ ಸಿಗದೇ ಸ್ಥಳೀಯ ಅರಣ್ಯಾಧಿಕಾರಿಗಳು ಜನರಿಗೆ ಉತ್ತರ ನೀಡುಲು ಸಾಧ್ಯವಾಗುತ್ತಿಲ್ಲ ಎಂದು ಈ ಭಾಗದ ಜನರು ಅಭಿಪ್ರಾಯ ಪಟ್ಟಿದ್ದಾರೆ.
SUMMARY | elephants attack in sirigere shimoga aynuru
KEY WORDS | elephants attack in sirigere shimoga aynuru