SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಬೆಳಗಾವಿಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣ ತೀವ್ರ ಕುತೂಹಲ ಮೂಡಿಸಿದೆ. ರಾಜ್ಯದೆಲ್ಲಡೆ ಈ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿ ನಡೆದ ಘಟನೆಯಲ್ಲಿ ಪತ್ನಿಯೇ ಪತಿಯನ್ನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗೆ ಆರೋಪ ಮಾಡಿ ಪೊಲೀಸರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು ಕೊಲೆ ಆರೋಪಿಯ ಮಗಳು.
ಹೌದು, ತನ್ನ ತಾಯಿಯ ನಡವಳಿಕೆ ಬಗ್ಗೆ ಅನುಮಾನಗೊಂಡ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಳು. ಈ ಸಂಬಂಧ ವಿಚಾರಣೆ ಆರಂಭಿಸಿದ ಪೊಲೀಸರು ಅದಾಗಲೇ ಅಂತ್ಯಕ್ರಿಯೆಗೊಂಡಿದ್ದ ಮೃತದೇಹವನ್ನ ಮೆಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇದೀಗ ಪ್ರಕರಣದಲ್ಲಿ ಮುಖ್ಯ ಆರೋಪಿ, ಉದ್ಯಮಿಯ ಪತ್ನಿ ಉಮಾ (41), ಅವರ ಫೇಸ್‌ಬುಕ್ ಸ್ನೇಹಿತ, ಕೊಡಗು ಜಿಲ್ಲೆಯ ಶನಿವಾರಸಂತೆ ಗ್ರಾಮದ ಶೋಭಿತ್ ಗೌಡ (30) ಮತ್ತು ಪವನ್ (27) ರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಕ್ಟೋಬರ್ 9 ಉದ್ಯಮಿ ಮೃತಪಟ್ಟಿದ್ದರು. ಅವರು ಕೊಲೆಯಾಗಿರುವ ಶಂಕೆ ಇದೆ ಎಂದು ಸಂತೋಷ ಅವರ ಪುತ್ರಿ ಸಂಜನಾ ದೂರು ನೀಡಿದ್ದರು. ಅಕ್ಟೋಬರ್ 10ರಂದು ಹೂಳಲಾಗಿದ್ದ ಅವರ ಶವವನ್ನು ಬುಧವಾರ ಹೊರತೆಗೆದು ತನಿಖೆ ಕೈಗೊಳ್ಳಲಾಗಿದೆ.
SUMMARY | Belagavi: A man from Kodagu and his wife have been arrested in connection with the murder of a real estate tycoon in Belagavi.
KEYWORDS | Belagavi, Kodagu, arrested ,murder case, real estate tycoon in Belagavi