SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 30, 2024 | ಶಿವಮೊಗ್ಗದ ಸಾಗರ ಭಟ್ಕಳ ರೋಡ್ನಲ್ಲಿ ಸಿಂಹಗಳ ಗುಂಪೊಂದು ಓಡಾಡುತ್ತಿದೆ ಎನ್ನುವ ಸಂದೇಶ ಹೊಂದಿರುವ ವಿಡಿಯೋಗಳು ವೈರಲ್ ಆಗುತ್ತಿದೆ ಸಿಂಹಿಣಿಗಳ ಗುಂಪೊಂದು ತನ್ನ ಮರಿಗಳ ಜೊತೆ ನಡುರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ಇದಾಗಿದ್ದು, ಈಗಾಗಲೇ ಶಿವಮೊಗ್ಗದ ವಾಟ್ಸಾಪ್ಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಶಿವಮೊಗ್ಗದ ವಿಡಿಯೋ ಅಲ್ಲ.
ತ್ಯಾವರೆಕೊಪ್ಪ ಸಿಂಹದಾಮ ಬಿಟ್ಟರೆ, ಶಿವಮೊಗ್ಗದಲ್ಲಿ ಸಿಂಹಗಳ ಇರುವಿಕೆ ಇಲ್ಲ. ಇತ್ತೀಚೆಗೆ ಪೆಟ್ರೋಲ್ ಬಂಕ್ವೊಂದರಲ್ಲಿ ಸಿಂಹ ಓಡಾಡುತ್ತಿರುವ ದೃಶ್ಯವನ್ನು ವೈರಲ್ ಆಗಿತ್ತು. ಅದರ ಮೂಲ ಶಿಕಾರಿಪುರ, ಸೊರಬ, ಲಕ್ಕಿನಕೊಪ್ಪ ಅಂತೆಲ್ಲಾ ಹೇಳಲಾಗಿತ್ತು. ಆ ಬಳಿಕ ಆ ವಿಡಿಯೋ ಗುಜರಾತ್ನದ್ದು ಎಂದು ಹೇಳಲಾಗಿದೆ
ಇನ್ನೂ ಸದ್ಯ ಶಿವಮೊಗ್ಗದ ಸಾಗರ ಟು ಭಟ್ಕಳ ರೋಡ್ನಲ್ಲಿ ಕಾಣಿಸಿದ ಸಿಂಹಿಣಿಗಳ ವಿಡಿಯೋ ಬಗ್ಗೆ ಗಮನಿಸುವುದಾದರೆ, ಈ ವಿಡಿಯೋ ಶಿವಮೊಗ್ಗದಲ್ಲ. ಅಸಲಿಗೆ ನಮ್ಮ ರಾಜ್ಯದ್ದೇ ಅಲ್ಲ, ಬದಲಾಗಿ ಗುಜರಾತ್ನ ಭಾವನಗರದಲ್ಲಿ ಕಾಣಿಸಿರುವ ವಿಡಿಯೋ ಇದಾಗಿದೆ.
ಗೂಗಲ್ ರಿವರ್ಸ್ ಇಮೇಜ್ ಸರ್ಚ್ನಲ್ಲಿ ಹುಡುಕಿದಾಗ, ಈ ವಿಡಿಯೋ ಕಳೆದ ಸೆಪ್ಟೆಂಬರ್ ಏಳರಂದು ಅಮೇಜಿಂಗ್ ಅಮ್ರೇಲಿ ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪೋಸ್ಟ್ ಆಗಿರುವುದು ಕಂಡು ಬಂದಿದೆ. ಮತ್ತು ಗುಜರಾತ್ ವೈಲ್ಡ್ ಲೈಫ್ ಅಫಿಶಿಯಲ್ ಎಂಬ Instagram ನಲ್ಲಿಯು ಈ ವಿಡಿಯೋ ಲಭ್ಯವಾಗಿದೆ. ಆನಂತರ ಈ ವಿಡಿಯೋ ದೇಶದೆಲ್ಲೆಡೆ ವೈರಲ್ ಆಗಿದ್ದು ಆಯಾ ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಕಾಣ ಸಿಕ್ಕ ವಿಡಿಯೋ ಇದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲಾ ಸುಳ್ಳಾಗಿದ್ದು, ವಿಡಿಯೋ ಮೂಲ ಗುಜರಾತ್ನದ್ದಾಗಿದೆ.
Viral video of lion family, malenadutoday, ಶಿವಮೊಗ್ಗ ಸಾಗರ ಭಟ್ಕಳ ವೈರಲ್ ವಿಡಿಯೋ, ಗುಜರಾತ್ ಸಿಂಹಗಳ ವಿಡಿಯೋ
View this post on Instagram