ಈ ಬಾರಿಯ ಅದ್ದೂರಿ ದಸರಾಕ್ಕೆ ಸಿಎಂ ಸ್ಪಂಧನೆ- ಚೆನ್ನಿ ಶ್ಲಾಘನೆ ನಾಡಹಬ್ಬಕ್ಕೆ ಸಜ್ಜಾಗಲಿದೆ ಸಕ್ರೆಬೈಲು ಗಜಪಡೆ
ಶಿವಮೊಗ್ಗದಲ್ಲಿ ಪ್ರತಿವರ್ಷ ನಡೆಯುವಂತೆ ಈ ಬಾರಿಯೂ ನಾಡಹಬ್ಬ ದಸರಾ ಅದ್ದೂರಿಯಾಗಿ ನೆರವೇರಲಿದೆ. ಶಿವಮೊಗ್ಗದ ದಸರಾ ಹಬ್ಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾಗಿ ಸ್ಪಂಧನೆ ಮಾಡಿರುವುದಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಚೆನ್ನಬಸಪ್ಪ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆಯಷ್ಟೆ ಅದ್ದೂರಿ ದಸರಾ ನೆಡೆಸಲು ಹಣ ಬಿಡುಗಡೆ ಮಾಡಬೇಕು ಎಂದು ನಾನು ಮತ್ತು ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಸಿಎಂ ರನ್ನು ಭೇಟಿ ಮಾಡಿದೆವು. ಮುಖ್ಯಮಂತ್ರಿಗಳು ಸಹ ಉತ್ತಮ ಸ್ಪಂದನೆ ನೀಡಿದ್ದಾರೆ, ದಸಾರಾ ಆಚರಣೆಗೆ ಹಣ ಬಿಡುಗಡೆಗೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಶಿವಮೊಗ್ಗದಲ್ಲಿ ಈ ಬಾರಿ ಅದ್ದೂರಿ ದಸರಾ ಆಚರಣೆ ನಡೆಯುತ್ತೆ ಎಂದು ಚೆನ್ನಬಸಪ್ಪ ಹೇಳಿದರು.
ಇನ್ನು ಅಂಬಾರಿ ದಸರಾ ಸಹ ಈ ಸಲ ನಡೆಯುತ್ತೆ ರಾಜ್ಯದಲ್ಲೇ ಎರಡನೇ ಅದ್ದೂರಿ ದಸರಾ ಆಚರಣೆ ನಮ್ಮಲ್ಲಿ ನಡೆಯುತ್ತೆ 14 ಸಮಿತಿಗಳು ಸಹ ಪಾಲಿಕೆ ಆಯುಕ್ತರು ಮಾಡಿದ್ದಾರೆ ಹತ್ತು ದಿನಗಳ ಕಾಲ ಅದ್ದೂರಿ ದಸರಾ ನಡೆಸಲಾಗುತ್ತೆ ಜಿಲ್ಲೆಗೆ ಪದ್ಮಶ್ರೀ ತಂದು ಕೊಟ್ಟ ಗಮಕಕ್ಕೆ ಉತ್ತೇಜನ ಕೊಡಲು ತಯಾರಿ ನಡೆಯುತ್ತಿದೆ, ಸಕ್ರೈಬೈಲು ಆನೆ ಬಿಡಾರದಿಂದ ಆನೆ ಕಳಿಸಲು ಮನವಿ ಮಾಡಿದ್ದೇವೆ,ಮೂರು ಗಂಡು ಆನೆಗಳು ದಸರಾದಲ್ಲಿ ಬಾಗಿ ಆಗಲಿವೆ ಎಂದು ಚೆನ್ನಿ ಹೇಳಿದರು.
ಇದೇ ವೇಳೆ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಸದನದಲ್ಲಿ ನಾನು ಮಾತಾಡಿದ್ದೇ ಚಂದ್ರಶೇಖರ್ ಪತ್ನಿಯನ್ನು ಬೆಂಗಳೂರಿಗೆ ಕರೆಸಿ ಚೆಕ್ ನೀಡಲು ತಿರ್ಮಾನ ಆಗಿದೆ ತಡ ಆಗಿದೆ ಆದರೂ ಕಾರ್ಯ ರೂಪಕ್ಕೆ ಸಹ ಬಂದಿದೆ, ಇನ್ನೂ ಎರಡ್ಮೂರು ದಿನದಲ್ಲಿ ಚಂದ್ರಶೇಖರ್ ಕುಟುಂಬಕ್ಕೆ ಪರಿಹಾರ ಕೊಡಲಾಗುತ್ತೆ, ಕುಟುಂಬದ ಸದಸ್ಯನಿಗೆ ಸರ್ಕಾರಿ ಕೆಲಸ ನೀಡಲು ಸಹ ಮನವಿ ಮಾಡಿದ್ದೇನೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೂ ಸಹ ಕೃತಜ್ಞನೆ ಸಲ್ಲಿಸುತ್ತೇನೆ ಎಂದು ಚೆನ್ನಿ ಹೇಳಿದರು.

