SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 27, 2025
ಸೊರಬ | ವಿಧಾನಸಭಾ ಮತಕ್ಷೇತ್ರ ಸೊರಬದ ತಾಲೂಕು ಕಚೇರಿಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು “ಭೂ ಸುರಕ್ಷಾ” ಯೋಜನೆಯಡಿ ಭೂ ದಾಖಲೆಗಳ ಇ ಖಜಾನೆ ಡಿಜಿಟಲೀಕರಣ ಕೊಠಡಿಯನ್ನು ಇಂದು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರವು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಅತಿ ದೊಡ್ಡ ಬದಲಾವಣೆಯನ್ನು ತಂದಿದೆ. ಇ-ಖಜಾನೆ ವ್ಯವಸ್ಥೆಯಿಂದ ಜನ ಸಮುದಾಯಕ್ಕೆ ಬಹಳ ಅನುಕೂಲವಾಗಲಿದೆ. ರೈತರ ಹಕ್ಕುಗಳನ್ನು ಸಂರಕ್ಷಣೆ ಮಾಡಲಿದೆ. ದಾಖಲೆಗಳು ಡಿಜಿಟಲೀಕರಣ ಗೊಳ್ಳುವುದರಿಂದ ಸುಲಭ ಮತ್ತು ಸುಭದ್ರವಾಗಿ ಇರಲಿವೆ. ಇ-ದಾಖಲೆಗಳನ್ನು ತಿದ್ದಲು ಕಳೆಯಲು ಅಸಾಧ್ಯ. ಅಗತ್ಯ ಸಂದರ್ಭದಲ್ಲಿ ತಂತ್ರಜ್ಞಾನ ನೆರವಿನಿಂದ ಸುಲಭವಾಗಿ ಪಡೆಯಬಹುದಾಗಿದೆ ಎಂದರು ನಂತರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಸಾಗರ ಉಪವಿಭಾಗಾಧಿಕಾರಿ ಶ್ರೀ ಯತೀಶ್, ಐ.ಎ.ಎಸ್ ಕು.ದೃಷ್ಟಿ ಜೆಸ್ವಾಲ್, ತಹಶೀಲ್ದಾರ್ ಶ್ರೀಮತಿ ಮಂಜುಳಾ ಹೆಗಡೆವಾರ್, ಇಒ ಶ್ರೀ ಪ್ರದೀಪ್ ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
SUMMARY | Hon’ble District In-charge Minister Madhu Bangarappa inaugurated the e-treasury digitization room of land records under the “Bhu Suraksha” scheme at the taluk office in Soraba, assembly constituency, here today.
KEYWORDS | District Incharge, Madhu Bangarappa, e treasury,