ಸಿಟಿಯಲ್ಲಿಯೇ 5 ಕೋಟಿ ವೆಚ್ಚದ ಕಾಮಗಾರಿಗೆ ಉಸ್ತುವಾರಿ ಸಚಿವರ ಗುದ್ದಲಿ ಪೂಜೆ
Public Works Department to lay foundation stone for all-round development works at Allama Prabhu Park in the city

SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 25, 2025
ಶಿವಮೊಗ್ಗ ಲೋಕೋಪಯೋಗಿ ಇಲಾಖೆಯು ನಗರದ ಅಲ್ಲಮ ಪ್ರಭು ಉದ್ಯಾನವನ (ಫ್ರೀಡಂ ಪಾರ್ಕ್)ದಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವರಾದ ಎಸ್ ಮಧು ಬಂಗಾರಪ್ಪನವರು ಚಾಲನೆ ನೀಡಿದರು.
ಐದು ಕೋಟಿ ರೂ ವೆಚ್ಚದದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿಯ ಈ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೋಳಿರವರು ನೆರವೇರಿಸಬೇಕಿತ್ತು. ಆದರೆ ಸತೀಶ್ ಜಾರಕಿಹೋಳಿಯವರು ಕಾರಣಾತರಗಳಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಗುದ್ದಲಿ ಪೂಜೆ ಮಾಡುವ ಮೂಲಕ ಅಲ್ಲಮಪ್ರಭು ಉದ್ಯಾನವನದ ಸರ್ವಾಂಗೀಣ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮ ಮುಗಿದ ನಂತರ ಸಚಿವರು ಮಲೆನಾಡ ಕರಕುಶಲ ಉತ್ಸವ ಸರಸ್ ಮೇಳ ಹಾಗೂ ಪುಷ್ಪಸಿರಿ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹಾಗೆಯೇ ಅಲ್ಲಿದ್ದ ಎಲ್ಲಾ ವಸ್ತುಗಳನ್ನು ವೀಕ್ಷಿಸಿ ಕೆಲವೊಂದು ವಸ್ತುಗಳನ್ನು ಕೊಂಡುಕೊಂಡರು ಈವೇಳೆ ಸಚಿವರಿಗೆ ಶಾಸಕ ಚನ್ನಬಸಪ್ಪ, ಜಿಲ್ಲಾಧಿಕಾರಿ ಗುರುದತ್ ಹೆಗ್ಡೆ ಎಸ್ಪಿ ಮಿಥುನ್ ಕುಮಾರ್ ಹಾಗೂ ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ್ ಸಾಥ್ ನೀಡಿದರು.
SUMMARY | Public Works Department to lay foundation stone for all-round development works at Allama Prabhu Park in the city
KEYWORDS | development, Allama Prabhu Park, shivamogga,