SHIVAMOGGA | MALENADUTODAY NEWS | Aug 13, 2024 ಮಲೆನಾಡು ಟುಡೆ
ಹೆಣ್ಣು ಸಿಗದವರಿಗೆ ಮದುವೆ ಮಾಡಿಸ್ತೀವಿ ಎಂದು ಯಾವುದೋ ಮಹಿಳೆಯ ವಿವಾಹ ಮಾಡಿಸಿ ಲಕ್ಷಾಂತರ ರೂಪಾಯಿ ಬ್ರೋಕರೇಜ್ ಪಡೆದು ಮಾಯವಾಗುತ್ತಿದ್ದ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಐದನೇ ಪತಿಯ ಜೊತೆಗೆ ಮಹಿಳೆಯೊಬ್ಬಳು ಇಂತಹದ್ದೊಂದು ದೊಡ್ಡ ಮದುವೆ ಗ್ಯಾಂಗ್ನ್ನ ನಡೆಸ್ತಿದ್ದಳು ಎಂಬುದು ಅಚ್ಚರಿ ಸಂಗತಿ
ಗುಬ್ಬಿ ಮೂಲದ ವ್ಯಕ್ತಿಯೊಬ್ಬರನ್ನು ಮದುವೆಯಾಗುವ ಡ್ರಾಮಾ ಮಾಡಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಖತರ್ನಾಕ್ ಮಹಿಳೆ ಮತ್ತು ಆಕೆಯ ಪಟಾಲಮ್ಮನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಆರೋಪಿ ಲಕ್ಷ್ಮೀ ಜತೆಗೆ ಕೋಮಲಾ, ಸಿದ್ದಪ್ಪ, ಲಕ್ಷ್ಮಮ್ಮ ಬಂಧಿತರು. ವಿಜಯ್ ಎಂಬಾತನಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಗುಬ್ಬಿ ತಾಲೂಕಿನ ವ್ಯಕ್ತಿಯೊಬ್ಬರಿಗೆ ಮದುವೆಯಾಗಿರಲಿಲ್ಲ. ಈ ಕುಟುಂಬವನ್ನ ಸಂಪರ್ಕಿಸಿದ್ದ ಲಕ್ಷ್ಮೀ, ಕೋಮಾಲಳನ್ನು ತೋರಿಸಿ ಮದುವೆ ಮಾಡಿಸಿದ್ದಾಳೆ. ಆ ಬಳಿಕ 1.50 ಲಕ್ಷ ರೂಪಾಯಿ ಹಣ ಪಡೆದಿದ್ದಾಳೆ. ಇತ್ತ ಕೋಮಲಾ ಎರಡೇ ದಿನಕ್ಕೆ 25 ಗ್ರಾಂ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾಳೆ. ಈ ಸಂಬಂಧ ಸಂತ್ರಸ್ತರು ದೂರು ನೀಡಿದ್ದರು.
ಗುಬ್ಬಿ ಪೊಲೀಸರು ಹುಬ್ಬಳ್ಳಿಯ ರೋಣದಲ್ಲಿ ಲಕ್ಷ್ಮಿಯನ್ನು, ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕೋಮಾಲಳನ್ನು, ಚನ್ನರಾಯಪಟ್ಟಣದಲ್ಲಿ ಸಿದ್ದಪ್ಪ ಹಾಗೂ ಲಕ್ಷ್ಮಮ್ಮನನ್ನ ಬಂಧಿಸಿದ್ದಾರೆ. ಈ ಗ್ಯಾಂಗ್ ಮದುವೆ ವಿಚಾರದಲ್ಲಿಯೇ ಹಲವರಿಗೆ ವಂಚಿಸಿದ್ದು ಸದ್ಯ ತನಿಖೆ ಮುಂಧುವರಿದಿದೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ