SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 18, 2025
ಇಂಡಿಯನ್ ಎಕ್ಸ್‌ಪ್ರೆಸ್ ವತಿಯಿಂದ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್, ಟಿಎಂಎಇಎಸ್ ಆಯುರ್ವೇದ ಮೆಡಿಕಲ್ ಕಾಲೇಜು, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗು ಜಿಲ್ಲಾ ಆಯುಷ್ ಇಲಾಖೆಯಿಂದ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆಸಲಾಯಿತು.
ಈ ಉಚಿತ ತಪಾಸಣೆಯ ಸದುಪಯೋಗವನ್ನು ಪಡೆಯಲು ನೂರಾರು ಜನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಯುರ್ವೇದ, ಪಾರಂಪರಿಕ ವೈದ್ಯ ಪದ್ಧತಿ, ಹೋಮಿಯೋಪತಿ, ಯುನಾನಿ, ಈ ನಾಲ್ಕು ತರಹದ ನುರಿತ ತಜ್ಞರಿಂದ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಹಾಗೆಯೇ ವಿವಿಧ ಖಾಯಿಲೆಗಳಿಗೆ ಸಂಬಂಧ ಪಟ್ಟ ಔಷಧಿಗಳನ್ನು ಸಹ ವಿತರಿಸಲಾಯಿತು. ಇಲ್ಲಿ ಸರ್ಕಾರಿ ಹಾಗೂ ಖಾಸಗಿ ಎಂಬ ಎರಡು ಪ್ರತ್ಯೇಕ ಕೌಂಟರ್‌ಗಳನ್ನು ಮಾಡಲಾಗಿತ್ತು. ಸರ್ಕಾರಿ ವಿಭಾಗದಲ್ಲಿ ತಪಾಸಣೆ ಉಚಿತವಾಗಿದ್ದರೆ ಖಾಸಗಿ ವಿಭಾಗದಲ್ಲಿ ಹಣ ಪಾವತಿ ಮಾಡಬೇಕಿತ್ತು. ಅನೇಕ ಆಯುರ್ವೇದಿಕ್ ಗಿಡ ಮೂಲಿಕೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಈ ಸಂದರ್ಭದಲ್ಲಿ ವೈದ್ಯರು ಮೂಳೆ, ಕೀಲು, ಚರ್ಮದ ವ್ಯಾದಿ, ಶುಗರ್, ಬಿಪಿ, ಕಿಡ್ನಿಯಲ್ಲಿ ಕಲ್ಲು, ಗ್ಯಾಂಗ್ರಿನ್, ಅಲ್ಸರ್, ಥೈರಾಯ್ಡ್ ಬೊಜ್ಜು, ಪ್ರಸೂತಿ ಹಾಗೂ ಸ್ತ್ರೀ ಸಂಬಂಧಿತ ಸಮಸ್ಯೆ ನರೋಳಿಗಳಿಗೆ ಹಾಗೂ ಇನ್ನಿತರೆ ರೋಗಗಳಿಗೆ ತಪಾಸಣೆ ನಡೆಸಿದರು. ಹಾಗೆಯೇ ಅದಕ್ಕೆ ಸಂಬಂಧಪಟ್ಟು ಔಷದಿಯನ್ನು ವಿತರಿಸಿದರು.
SUMMARY | A free health check-up camp was held today at the Government Employees’ Bhavan in the city.
KEYWORDS | health check-up, Government Employees’ Bhavan, indian express,