SHIVAMOGGA | MALENADUTODAY NEWS | ಮಲೆನಾಡು ಟುಡೆ
ಶಿವಮೊಗ್ಗ | ಮಿಸ್ಸಾಗಿ ಇಂಜಿನಿಯರಿಂಗ್ ಪಾಸದ ಮೂವರು ಬಾಲ್ಯದ ಗೆಳೆಯರ ಜೀವನ ಕೆಲಸ ಹುಡುಕುವ ಸಂದರ್ಭದಲ್ಲಿ ಹೇಗಿರುತ್ತದೆ ಎಂಬ ಅಂಶವನ್ನು ಇಟ್ಟಕೊಂಡು ಹೆಣೆದಿರುವ ಇಂಟರ್ವಲ್ ಚಿತ್ರವು ಇದೇ ಮಾರ್ಚ್ 07 ರಂದು ರಾಜ್ಯದಾದ್ಯಂತ ಬಿಡುಗಡೆಯಗುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚಿತ್ರದ ನಿರ್ಮಾಪಕರಾದ ಸುಕೇಶ್ ಈ ಚಿತ್ರದಲ್ಲಿ ಗಣೇಶ್.ಎಸ್, ಗಣೇಶ್.ಟಿ, ಗಣೇಶ್.ಯು ಎಂಬ ಮೂವರು ಬಾಲ್ಯದ ಗೆಳೆಯರ ಕಥೆಯನ್ನು ಹೇಳುತ್ತಿದ್ದೇವೆ. ಈ ಮೂವರೂ ಹುಡುಗರು ತರಲೆಗಳು. ಅವರಿಗೆ ಇಂಜಿನಿಯರಿಂಗ್ ಓದಿ, ಕೆಲಸಕ್ಕಾಗಿ ಬೆಂಗಳೂರು ಅಲೆದು ಅಲೆದು ಸಾಕಾಗಿರುತ್ತದೆ.
ಇಷ್ಟು ಮಾತ್ರವಲ್ಲದೇ ಇಬ್ಬರು ಹುಡುಗಿಯರೊಂದಿಗೆ ನಡೆಯುವ ಪ್ರೇಮ ಪ್ರಸಂಗ ಮತ್ತು ಅವರ ಮದುವೆ ಕುತೂಹಲ ಸಿನಿಮಾದ ಇಂಟರ್ಸ್ಟಿಂಗ್ ಸಂಗತಿಯಾಗಿದೆ. ಮೂವರು ಹಳ್ಳಿ ಹುಡುಗರ ತುಂಟತನ, ಪ್ರೇಮ ಹಾಗು ಹಾಸ್ಯಮಯ ಇರುವ ಕುಟುಂಬದೊಂದಿಗೆ ವೀಕ್ಷಿಸಬಹುದಾದ ಚಿತ್ರ ಇದಾಗಿದೆ ಎಂದರು.
ಚಿತ್ರದ ನಾಯಕ ನಟ ಶಶಿರಾಜ್ ಮಾತನಾಡ್ತಾ ಬೆಂಗಳೂರಿನ ಹವ್ಯಾಸಿ ರಂಗಭೂಮಿಯಲ್ಲಿ ನಟನೆ ಪ್ರಾರಂಭಿಸಿದೆ. ನಂತರ ಅನೇಕ ದಾರವಾಹಿಗಳಲ್ಲಿ ಅಭಿನಯಿಸಿದೆ. ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದೇನೆ. ಈ ಸಿನಿಮಾ ಸ್ಕ್ರಿಪ್ಟ ತುಂಬಾ ಚೆನ್ನಾಗಿದೆ. ಚಿತ್ರದಲ್ಲಿ ನನ್ನ ಪಾತ್ರ ನೋಡುವ ಶೇ 99 ರಷ್ಟು ಜನ ಮಧ್ಯಮ ವರ್ಗದ ಯುವಕರಿಗೆ ಅವರ ನಿಜವಾದ ಜೀವನ ಕಣ್ಮುಂದೆ ಬರಲಿದೆ ಎಂದರು
ಈ ಚಿತ್ರದ ತಾರಾಗಣವನ್ನು ನೋಡುವುದಾದರೆ ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸಹನಾ ಆರಾಧ್ಯ, ಸಮಿಕ್ಷಾ, ದಾನಂ ಶಿವಮೊಗ್ಗ , ಸುಕಿ, ಚರಿದ್ರರಾವ್, ರಂಗನಾಥ ಮೊದಲಾದವರಿದ್ದಾರೆ. ಈ ಚಿತ್ರವನ್ನು ಭರತ್ ವರ್ಷನಿರ್ದೇಶಿಸಿದ್ದು, ಚಿತ್ರಕ್ಕೆ ಸಂಗೀತವನ್ನು ವಿಕಾಸ್ ವಸಿಷ್ಠ ನೀಡಿದ್ದಾರೆ. ಸುಕಿ ಮತ್ತು ಭರತ್ ವರ್ಷ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
SUMMARY | Interval, which is based on the life of three childhood friends who have passed engineering as a miss, is set to release across the state on March 07.
KEYWORDS | engineering, Interval, movie, release,