SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | AYANURU SHIVAMOGGA| ಶಿವಮೊಗ್ಗ ತಾಲ್ಲೂಕು ಆಯನೂರು ಸಮೀಪದಲ್ಲಿರುವ ಹಾರ್ಡ್ವೇರ್ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಿನ್ನೆ ನಡೆದಿದೆ. ಇಲ್ಲಿನ ಸಾಗರ ಮುಖ್ಯರಸ್ತೆಯಲ್ಲಿಯೇ ಇರುವ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಶಾರ್ಟ್ ಸರ್ಕೀಟ್ನಿಂದ ಇಲ್ಲಿನ ಆರ್.ವಿ ಟ್ರೇಡರ್ಸ್ ಹೆಸರಿನ ಹಾರ್ಡ್ವೇರ್ ಅಂಗಡಿಗೆ ಬೆಂಕಿ ತಗುಲಿದೆ ಎನ್ನಲಾಗಿದ್ದು, ಅಂಗಡಿಯಲ್ಲಿದ್ದ ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಸುಟ್ಟಿದೆ.
ಇನ್ನೂ ಹೊತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು. ಘಟನೆಯಲ್ಲಿ ಕಂಪ್ಯೂಟರ್, ಏಸಿ, ಫ್ರಿಡ್ಜ್, ಸಿಸಿಟಿವಿ ಕ್ಯಾಮೆರಾ, ಸಿಮೆಂಟ್ ಇನ್ನಿತರೆ ವಸ್ತುಗಳು ಸುಟ್ಟಿದ್ದು, ಅಂದಾಜು ₹30 ಲಕ್ಷ ನಷ್ಟವಾಗಿದೆ ಎಂದು ಹೇಳಲಾಗಿದೆ.
SUMMARY | A hardware shop caught fire due to a short circuit and cash and goods worth lakhs of rupees were gutted in a fire at Ayanur near here on Tuesday.

KEYWORDS | hardware shop caught fire, short circuit, Ayanur near kumsi,