SHIVAMOGGA| MALENADUTODAY NEWS | ಮಲೆನಾಡು ಟುಡೆ Mar 4, 2025
ಬೇರೆ ಕಡೆಗಳಿಂದ ಬಂದ ಪಾರ್ಸೆಲ್ ಮೂಟೆಯೊಂದನ್ನು ಕೆಳಕ್ಕೆ ಹಾಕುತ್ತಲೇ ಸ್ಫೋಟಗೊಂಡು, ನಾಲ್ವರು ಕಾರ್ಮಿಕರು ಗಾಯಗೊಂಡಿರುವ ಘಟನೆಯ ದೃಶ್ಯ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಈ ದೃಶ್ಯವೂ ಕಾಕಿನಾಡದ್ದು ಎನ್ನಲಾಗಿದ್ದು ಇಲ್ಲಿನ ಬಾಲಾಜಿ ಟ್ರಾನ್ಸಫೋರ್ಟ್ನಲ್ಲಿ ಈ ಘಟನೆ ನಡೆದಿದೆ.
ಪಟಾಕಿಗಳು ತುಂಬಿದ್ದ ಪಾರ್ಸೆಲ್ ಮೂಟೆಯನ್ನು ಅನ್ಲೋಡ್ ಮಾಡುವಾಗ ಘಟನೆ ಸಂಭವಿಸಿದೆ. ನಿನ್ನೆ ಸೋಮವಾರ ಕಾಕಿನಾಡದ ಜೈ ಬಾಲಾಜಿ ಟ್ರಾನ್ಸ್ಪೋರ್ಟ್ಸ್ನಲ್ಲಿ ಪಟಾಕಿಗಳ ಪಾರ್ಸೆಲ್ ಅನ್ನು ಆವರಣದಲ್ಲಿ ಇಳಿಸುತ್ತಿದ್ದಾಗ, ಮೂಟೆ ಇದ್ದಕ್ಕಿದ್ದ ಹಾಗೆ ಸ್ಫೋಟಗೊಂಡಿದೆ. ಪರಿಣಾಮ ಅಲ್ಲಿದ್ದ ನಾಲ್ವರಿಗೂ ಗಂಭೀರ ಗಾಯಗಳಾಗಿವೆ. ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪಟಾಕಿ ಪಾರ್ಸೆಲ್ ಮೂಟೆ ಕೆಳಕ್ಕೆ ಬಿದ್ದಾಗ, ಅದು ಘರ್ಷಣೆಗೆ ಒಳಗಾಗಿ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆದಾಗ್ಯು ಸುರಕ್ಷತಾ ಕ್ರಮವಹಿಸದೇ ಪಟಾಕಿಯ ಮೂಟೆಗಳನ್ನು ಪಾರ್ಸೆಲ್ನಲ್ಲಿ ಕಳುಹಿಸಿದ್ದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
View this post on Instagram