SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 24, 2024
ಬೈಕ್ ಡಿಕ್ಕಿ: ಲಾರಿ ಚಾಲಕ ಸಾವು
ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಬೈಕ್ ಡಿಕ್ಕಿಯಾಗಿ ಲಾರಿ ಚಾಲಕರೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಲಾರಿ ಟಯರ್ ಪಂಚರ್ ಆಗಿದ್ದ ಕಾರಣ ಟಯರ್ ಬದಲಾವಣೆ ಮಾಡುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ತೀರ್ಥಹಳ್ಳಿಯ ವ್ಯಕ್ತಿಯೊಬ್ಬರು ಕೆಲಸದ ಮೇಲೆ ಶಿಕಾರಿಪುರಕ್ಕೆ ಬಂದಿದ್ದರು, ಹೊನ್ನಾಳಿ ರೋಡ್‌ನಲ್ಲಿ ಲಾರಿ ಪಂಚರ್ ಆಗಿತ್ತು. ಈ ವೇಳೆ ಟಯರ್ ಬದಲಾವಣೆಗೆ ಮುಂದಾದ ಅವರು, ಆ ಕೆಲಸದಲ್ಲಿ ನಿರತರಾಗಿದ್ದರು. ಇದೇ ಸಂದರ್ಭದಲ್ಲಿ ಶಿಕಾರಿಪುರದಿಂದ ಹೊನ್ನಾಳಿಗೆ ಹೋಗುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಲಾರಿಚಾಲಕರು ತೀವ್ರಗಾಯದಿಂದಾಗಿ ಸಾವನ್ನಪ್ಪಿದ್ದಾರೆ.
ಕಮಲಮ್ಮ ಕಾಣೆ
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಎ.ಸಿ. ಮಂಜುನಾಥ್ ಎಂಬುವವರ ತಾಯಿ ಕಮಲಮ್ಮ ಎಂಬ 76 ವರ್ಷ ಮಹಿಳೆ ಸೆ.03 ರಂದು ಮನೆಬಿಟ್ಟು ಹೋಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆ 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ದುಂಡುಮುಖ, ಗೋಧಿ ಮೈಬಣ್ಣ ಹೊಂದಿರುತ್ತಾರೆ. ತಲೆಯಲ್ಲಿ 5 ಇಂಚು ಉದ್ದದ ಬಿಳಿ ಕೂದಲಿರುತ್ತದೆ. ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೌಕಳಿ ನೈಟಿ ಧರಿಸಿರುತ್ತಾರೆ. ಈ ಮಹಿಳೆಯ ಬಗ್ಗೆ ಸುಳಿವು ಕಂಡಲ್ಲಿ ಶಿವಮೊಗ್ಗ ಎಸ್.ಪಿ ಕಚೇರಿ 08182-261400, ಡಿವೈಎಸ್‌ಪಿ ತೀರ್ಥಹಳ್ಳಿ-08181-220388, ಸಿಪಿಐ ಮಾಳೂರು-9480803333, ಪಿಎಸ್‌ಐ ಆಗುವಂಬೆ-9480803314 ಇವರುಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
—————————
ನಾಲೆಯಲ್ಲಿ ಶವ ಪತ್ತೆ
ಇತ್ತ ಭದ್ರಾವತಿಯಲ್ಲಿ 55 ವರ್ಷದ ಮಹಿಳೆಯ ಮೃತದೇಹವೊಂದು ಚಾನಲ್‌ನಲ್ಲಿ ಪತ್ತೆಯಾಗಿದೆ. ಭದ್ರಾವತಿಯ ಕಲ್ಲಹಳ್ಳಿ ಭದ್ರ ಎಡದಂಡೆ ಕಾಲುವೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಇವರನ್ನ ಗಿರಿಜಾ ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ಇವರು ಕಾಣೆಯಾದ ಬಗ್ಗೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ, ಇತ್ತೀಚೆಗೆ ಯುವತಿಯೊಬ್ಬಳ ಶವ ಕೂಡ ಭದ್ರಾ ಚಾನಲ್‌ನಲ್ಲಿ ಪತ್ತೆಯಾಗಿತ್ತು.