SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | RAIN SHIVAMOGGA| ಶಿವಮೊಗ್ಗದಲ್ಲಿ ನಿನ್ನೆ ಸಂಜೆ ಹಸ್ತಾ ಮಳೆಯು ರೌದ್ರಾವತಾರವನ್ನೆ ತೋರಿದೆ. ಗುಡುಗು ಸಿಡಿಲಿ ಅಬ್ಬರದೊಂದಿಗೆ ತಡರಾತ್ರಿಯವರೆಗೂ ಸುರಿದ ಮಳೆ ಒಂದು ಹಂತದಲ್ಲಿ ಆತಂಕವನ್ನ ಸಹ ಮೂಡಿಸಿದೆ.
ಮಳೆಯ ಅಬ್ಬರಕ್ಕೆ ತುಂಗಾನದಿಗೆ ನೀರು ಹರಿದಿದ್ದು, ಹೊಳೆಯ ಅಬ್ಬರವೂ ಹೆಚ್ಚಿದೆ. ಇನ್ನೂ ಶಿವಮೊಗ್ಗ ನಗರವಷ್ಟೆ ಅಲ್ಲದೆ ಬಹುತೇಕ ಜಿಲ್ಲೆಯ ಎಲ್ಲಾ ಭಾಗಗಳಲ್ಲಿಯು ನಿನ್ನೆ ದಿನ ಭಾರೀ ಮಳೆಯಾಗಿದೆ.

ರಿಪ್ಪನ್ಪೇಟೆ ಸುತ್ತಮುತ್ತ ನಿನ್ನೆ ರಾತ್ರಿ ಎಡೆಬಿಡದೆ ಮಳೆಯಾಗಿದೆ. ಆನಂದಪುರದಲ್ಲಿಯು ಮಳೆಯ ಆರ್ಭಟದಿಂದಾಗಿ ರಸ್ತೆಗಳ ಮೇಲೆ ನೀರು ಹದಿದಿದ್ದು, ಚರಂಡಿ ತುಂಬಿ ಕೆಲವು ಅಂಗಡಿಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ.
ನಿನ್ನೆ ಸಂಜೆ ಹೊತ್ತಿಗೆ ಶುರುವಾದ ಮಳೆಯು ತಡರಾತ್ರಿಯವರೆಗೂ ಬಿಟ್ಟು ಬಿಡದೇ ಸುರಿದಿದೆ. ಇನ್ನೇನು ನಿಂತಿತು ಎನ್ನುವಷ್ಟರಲ್ಲಿ ದೊಡ್ಡಹನಿಯ ವರ್ಷಧಾರೆ ಧೋ ಎಂದು ಸುರಿಯುತ್ತಿತ್ತು. ಮೇಘಸ್ಫೋಟದ ರೀತಿಯಲ್ಲಿ ಒಂದೆ ಸಮನೆ ಮಳೆಯಾದ್ದರಿಂದ ಹಲವಡೆ ಸಣ್ಣಪುಟ್ಟ ತೊರೆಗಳು ಭರ್ತಿಯಾಗಿ ಹರಿದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪುರದಾಳ್ ಡ್ಯಾಮ್ ಕೋಡಿ ಬಿದ್ದು ಜಲಪಾತದ ರೀತಿಯಲ್ಲಿ ನೀರು ಹರಿಯುತ್ತಿದೆ.
ಇನ್ನೂ ಹವಾಮಾನ ಇಲಾಖೆಯ ಪ್ರಕಾರ, ಇವತ್ತು ಶಿವಮೊಗ್ಗದಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಸಾಗರ, ಆಗುಂಬೆ, ಶಿವಮೊಗ್ಗದಲ್ಲಿ ವ್ಯಾಪಕ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ. ಶಿವಮೊಗ್ಗವಷ್ಟೆ ಅಲ್ಲದೆ ಹಾವೇರಿ, ಗದಗ, ಧಾರವಾಡ, ದಾವಣಗೆರೆ, ದಕ್ಷಿಣ ಕನ್ನಡ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
SUMMARY | A yellow alert has been sounded in Shivamogga today. In Shivamogga, there is a warning of widespread rainfall in Sagar, Agumbe and Shivamogga. Apart from Shivamogga, there is a possibility of thundershowers in Haveri, Gadag, Dharwad, Davanagere, Dakshina Kannada, Ballari and Belagavi districts.
KEYWORDS | yellow alert , Shivamogga today, In Shivamogga, widespread rainfall, Sagar, Agumbe thundershowers in Haveri, Gadag, Dharwad, Davanagere, Dakshina Kannada, Ballari and Belagavi districts,