SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 7, 2024 | SHIVAMOGGA NEWS | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮಹಿಳೆಯೊಬ್ಬರ ಚಿಕಿತ್ಸೆಗಾಗಿ ಸ್ಥಳೀಯರು ನೆರವಿನ ಹಸ್ತವನ್ನ ಯಾಚಿಸಿದ್ದಾರೆ.
ಹೊಸನಗರ ತಾಲೂಕಿನ ಸೊರೆಕೊಪ್ಪ ವಾಸಿಯಾದ ರಾಮಚಂದ್ರ ಇವರ ಪುತ್ರಿ ಉಷಾ(32) ಎಂಬಾಕೆಗೆ ಎರಡೂ ಕಿಡ್ನಿ ವೈಫಲ್ಯ ಆಗಿದ್ದು ಕಷ್ಟದಿಂದ ದಿನದೂಡುವಂತಾಗಿದೆ
ಈಕೆಗೆ 2 ಚಿಕ್ಕ ಮಕ್ಕಳಿದ್ದು ತೀರಾ ಬಡತನ ಇರುವ ಕುಟುಂಬಕ್ಕೆ ಹಣದ ಅವಶ್ಯಕತೆ ಅಗತ್ಯವಿದ್ದು ಮನಸೋ ಇಚ್ಚೆ ಕೈಲಾದ ಧನ ಸಹಾಯ ಮಾಡಬೇಕಾಗಿ ವಿನಂತಿಸಿದ್ದಾರೆ
ಇವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಹಾಗೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಚಿಕಿತ್ಸೆ ಕುರಿತಾಗಿ ಎರಡು ಲಕ್ಷ ಹಣ ಖರ್ಚು ವೆಚ್ಚವಾಗಿದೆ
ಈಕೆಗೆ ವಾರಕ್ಕೆ ಕನಿಷ್ಟ ಎರಡು ಬಾರಿ ಡಯಲಿಸಸ್ ಚಿಕಿತ್ಸೆ ನೀಡವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈಕೆಗೆ ಧನ ಸಹಾಯದ ಅವಶ್ಯಕತೆ ಇದ್ದು, ಸಾರ್ವಜನಿಕರು ಧನ ಸಹಾಯ ನೀಡುವಂತೆ ಮನವಿದ್ದಾರೆ.
Summary | Locals in Hosanagara taluk of Shivamogga district have sought a helping hand for the treatment of a woman.
Keywords | Locals in Hosanagara taluk, Shivamogga district, , sought a helping hand for the treatment of a woman,