SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 1, 2024 | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಸಮೀಪ ವ್ಯಕ್ತಿಯೊಬ್ಬನ ಮೃತದೇಹ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆಯಾಗಿದೆ. ಮೃತದೇಹ ಹಾಗೂ ಸ್ಥಳದ ಸನ್ನಿವೇಶಗಳನ್ನ ಗಮನಿಸಿದರೇ, ಇದೊಂದು ಕೊಲೆ ಪ್ರಕರಣ ಇರಬಹುದು ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ.
ಮೃತ ವ್ಯಕ್ತಿಯು ರೈಲಿಗೆ ಡಿಕ್ಕಿಯಾಗಿ ಮೃತಪಟ್ಟಿದ್ದರೇ ಆತನ ದೇಹ ಛಿದ್ರವಾಗಿರುವ ಸಾದ್ಯತೆ ಇತ್ತು. ಆದರೆ ಇಲ್ಲಿ ಮೃತವ್ಯಕ್ತಿಯ ದೇಹದ ಮೇಲೆ ಹೆಚ್ಚು ಗಾಯಗಳಾಗಿಲ್ಲ. ಹೀಗಾಗಿ ಬೇರೆಲ್ಲಿಯೋ ಕೊಲೆ ಮಾಡಿ ಮೃತದೇಹವನ್ನು ಟ್ರ್ಯಾಕ್ ಮೇಲೆ ತಂದು ಹಾಕಿರುವ ಸಾದ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.
ಇವತ್ತು ಬೆಳಗ್ಗೆ ಸಾಗರ ತಾಲ್ಲೂಕು ಆನಂದಪುರ ಸಮೀಪದ ಅಂದಾಸುರ ರೈಲ್ವೆ ಗೇಟ್ ಬಳಿಯಲ್ಲಿ ಟ್ರ್ಯಾಕ್ ಮೇಲೆ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯ ಮೊಬೈಲ್, ಬೈಕ್ ಹಾಗೂ ಅದರ ಸೈಡ್ ಬ್ಯಾಗ್ನಲ್ಲಿ ಬಾಟಲಿ, ಪ್ಲಾಸ್ಟಿಕ್ ಕವರ್ ಪತ್ತೆಯಾಗಿದೆ. ಈತನನ್ನ ಜೆಸಿಬಿ ಆಪರೇಟರ್ ಎಂದು ಗುರುತಿಸಲಾಗಿದ್ದು, ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಮಹಜರ್ ನಡೆಸಿ ತನಿಖೆ ಆರಂಭಿಸಿದ್ದಾರೆ.