SHIVAMOGGA | MALENADUTODAY NEWS | ಮಲೆನಾಡು ಟುಡೆ Dec 14, 2024
ಸಿ ಸೆಕ್ಷನ್ ಡೆತ್ ಪ್ರಕರಣದಲ್ಲಿ (ಸಿಸೆರಿಯನ್) ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಎಡಿಸಿಎಸ್‌ಗಳಿಂದ ತಲಾ ಮೂರು ಕಂಪ್ಲೆಂಟ್‌ಗಳನ್ನ ಕೋರ್ಟ್‌ಗೆ ಸಲ್ಲಿಸಲಾಗಿದೆ. ರಾಜ್ಯಮಟ್ಟದ ಪತ್ರಿಕೆಯೊಂದರ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.
ಬಾಣಂತಿಯರ ಸರಣಿ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಇದಕ್ಕೆ non-standard-quality IV fluid ಪೂರೈಕೆಯಾಗಿರುವುದು ಕಾರಣ ಎಂದು ದೂಷಿಸಿತ್ತು. ಈ ಸಂಬಂಧ ಸಪ್ಲೆಯಾದ ಐವಿ ಪ್ಲೂಯೆಡ್‌ಗಳನ್ನ ಪರೀಕ್ಷೆಗೆ ಒಳಪಡಿಸಿತ್ತು. ಈ ಪೈಕಿ 22 ಬ್ಯಾಚ್ ಪ್ಲ್ಯೂಯೆಡ್ NSQ ಹೊಂದಿಲ್ಲ ಎಂದು ವರದಿ ಬಂದಿದೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಮೂಲದ ಫಾರ್ಮಾಸಿಟಿಕಲ್ ಕಂಪನಿ ವಿರುದ್ಧ ಐದು ಜಿಲ್ಲೆಗಳ Judicial Magistrate of First Class court ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಪ್ರಕರಣಕ್ಕೆ ಪೂರಕವಾಗಿ ಶಿವಮೊಗ್ಗ, ಚಿಕ್ಕಮಗಳೂರು Assistant Drugs Controllers (ADCs) ಗಳು ತಲ ಮೂರು ದೂರುಗಳನ್ನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿವೆ ಎನ್ನಲಾಗಿದೆ. ಈ ಜಿಲ್ಲೆಗಳನ್ನ ಹೊರತುಪಡಿಸಿ ಬೆಂಗಳೂರು ಸರ್ಕಲ್ 4 ಹಾವೇರಿ ಹಾಗೂ ಗದಗ ಜಿಲ್ಲೆಯ ಎಡಿಸಿಸ್‌ಗಳು ತಲಾ ಒಂದು ಕಂಪ್ಲೆಂಟ್‌ಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.


SUMMARY | Assistant Drugs Controllers (ADCs) of Shivamogga and Chikkamagaluru filed three complaints each, allegations of manufacturing and supplying non-standard-quality IV fluid to the state.
KEY WORDS | Assistant Drugs Controllers (ADCs) , Shivamogga , Chikkamagaluru , non-standard-quality IV fluid ,