SHIVAMOGGA | MALENADUTODAY NEWS | ಮಲೆನಾಡು ಟುಡೆ Dec 13, 2024
ಶಿವಮೊಗ್ಗದಿಂದ ಮೈಸೂರಿಗೆ ಮತ್ತೊಂದು ಟ್ರೈನ್ ಬಿಡುವಂತೆ ಕೇಂದ್ರ ಸಚಿವರ ಬಳಿ ಸಂಸದ ಬಿವೈ ರಾಘವೇಂದ್ರ ಮನವಿ ಮಾಡಿದ್ದಾರೆ. ನಿನ್ನೆದಿನ ನವದೆಹಲಿಯಲ್ಲಿ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಅವರನ್ನು ಭೇಟಿಯಾದ ಸಂಸದ ಬಿ.ವೈ. ರಾಘವೇಂದ್ರ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಕಾಮಗಾರಿಗಳ ಬಗ್ಗೆ ಚರ್ಚಿಸಿದರು.
ಈ ವೇಳೆ ಪ್ರತಿದಿನ ರಾತ್ರಿ ಶಿವಮೊಗ್ಗದಿಂದ ಮೈಸೂರು ಜಿಲ್ಲೆಗೆ ಅರಸೀಕೆರೆ-ಹಾಸನ-ಕೆ.ಆರ್. ನಗರ ಮಾರ್ಗವಾಗಿ ನೂತನ ರೈಲ್ವೇ ಸಂಪರ್ಕ ಒದಗಿಸುವಂತೆ ಮನವಿ ಮಾಡಿದರು. ಹಾಗೆಯೇ, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೇ ಇಲಾಖೆಯಿಂದ ನಡೆಯುತ್ತಿರುವ ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ ಹಾಗೂ ಶಿವ ಮೊಗ-ಶಿಕಾರಿಪುರ- ರಾಣೇಬೆನ್ನೂರು ನೂತನ ರೈಲ್ವೇ ಮಾರ್ಗದ ಕಾಮಗಾರಿಗಳ ಕುರಿತು ಚರ್ಚಿಸಿದರು.
SUMMARY | MP BY Raghavendra has requested Minister of State for Railways and Jal Shakti V. Somanna to provide a new train to Mysore via the Shivamogga Arasikere-Hassan-KR Nagar route.


KEY WORDS | Shivamogga Arasikere Hassan K.R.Nagar Mysuru Trai. Minister of State for Railways and Jal Shakti V somanna , new railway connectivity, Mp BY Raghavendra has appealed to Somanna