SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024
ಮನೆಯವರೆಲ್ಲಾ ಮದುವೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ, ಹೆಂಚು ತೆಗೆದು ಮನೆಯೊಳಗೆ ಇಳಿದ ಕಳ್ಳರು , ಚಿನ್ನ ಕದ್ದೊಯ್ದ ಪ್ರಸಂಗ ಶಿವಮೊಗ್ಗ ಜಿಲ್ಲೆ ಸೂಗೂರು ಗ್ರಾಮದಲ್ಲಿ ನಿನ್ನೆ ದಿನ ನಡೆದಿದೆ.
ಇಲ್ಲಿನ ವಿರೂಪಾಕ್ಷಪ್ಪ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯ ಬೀರುವಿನಲ್ಲಿ ಇಟ್ಟಿದ್ದ 50 ಗ್ರಾಮ್ ಬಂಗಾರವನ್ನ ಕಳ್ಳರು ಕದ್ದೊಯ್ದಿದ್ದಾರೆ. ನಿನ್ನೆದಿನ ಸ್ಥಳೀಯರ ಮದುವೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮನೆಯವರು ತೆರಳಿದ್ದರು. ಅದೇ ಕಾರ್ಯಕ್ರಮಕ್ಕೆ ಅಕ್ಕಪಕ್ಕದ ಮನೆಯವರು ಸಹ ತೆರಳಿದ್ದರು. ಇದೇ ಸಮಯದಲ್ಲಿ ಏಣಿ ಬಳಿ ಮನೆ ಮೇಲೆ ಏರಿದ ಕಳ್ಳರು , ಹೆಂಚು ತೆಗೆದು ಮನೆಯೊಳಗೆ ಇಳಿದು ಕಳ್ಳತನವಸೆಗಿದ್ದಾರೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ
SUMMARY | Gold stolen from a house in Suguru village, Shimoga


KEY WORDS | Gold stolen from a house, Suguru village, Shimoga