SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಬೆಜ್ಜವಳ್ಳಿ ಬಸ್ ನಿಲ್ದಾಣದ ಬಳಿಯಲ್ಲಿ ನಡೆದ ಅಪಘಾತ ಘಟನೆಯ ದೃಶ್ಯ ಮಲೆನಾಡು ಟುಡೆಗೆ ಲಭ್ಯವಾಗಿದೆ. ಇಲ್ಲಿನ ಸ್ಥಳೀಯ ಸಿಸಿ ಕ್ಯಾಮರಾವೊಂದಲ್ಲಿ ರೆಕಾರ್ಡ್ ಆಗಿರುವ ದೃಶ್ಯವನ್ನು ಗಮನಿಸಿದಾಗ, ಘಟನೆ ಬೇರೆಯದ್ದೇ ರೀತಿಯಲ್ಲಿ ನಡೆದಿದೆ ಎಂದು ಕಾಣುತ್ತಿದೆ.
ಈ ಮೊದಲು ವಿದ್ಯಾರ್ಥಿ ಬಸ್ಗಾಗಿ ಕಾಯುತ್ತಿದ್ದ ಎನ್ನಲಾಗಿತ್ತು. ಆದರೆ ಸಿಸಿ ಕ್ಯಾಮರಾದಲ್ಲಿ ಆತ ರೋಡ್ ಕ್ರಾಸ್ ಮಾಡುವ ಬಸ್ ಆತನಿಗೆ ಡಿಕ್ಕಿಯಾಗಿದೆ ಎಂದು ತೋರುತ್ತಿದೆ.
ಇವತ್ತು ಬೆಳಗ್ಗೆ 8.25 ರ ಹೊತ್ತಿಗೆ ಬೆಜ್ಜವಳ್ಳಿ ಮೇನ್ ರೋಡ್‌ಗೆ ವಿದ್ಯಾರ್ಥಿ ಬೈಕ್‌ನಲ್ಲಿ ಬಂದಿದ್ಧಾನೆ. ಆ ಬಳಿಕ ಮೇನ್ ರೋಡ್ ಕ್ರಾಸ್ ಮಾಡಲು ಮುಂದಾಗಿದ್ದಾನೆ. ಇದೇ ವೇಳೆ ಇನ್ನೊಂದು ಕಡೆಯಿಂದ ಮುಖ್ಯರಸ್ತೆಯಲ್ಲಿ ಬರುತ್ತಿದ್ದ ಬಸ್ ಆತನಿಗೆ ಡಿಕ್ಕಿಯಾಗಿದೆ. ಆತನಿಗೆ ಡಿಕ್ಕಿ ಹೊಡೆದ ಬಸ್ ರಸ್ತೆಬದಿಗೆ ಇಳಿದು ಚರಂಡಿಯೊಂದರ ಬಳಿಯಲ್ಲಿ ನಿಂತಿದೆ.

ಘಟನೆಯ ಬೆನ್ನಲ್ಲೆ ಸ್ಥಳೀಯರು ಓಡಿ ವಿದ್ಯಾರ್ಥಿಯನ್ನ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟೊತ್ತಿಗೆ ವಿದ್ಯಾರ್ಥಿ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ.
SUMMARY | MalnaduToday has accessed the scene of the accident that took place near Bejjavalli bus stand in Thirthahalli taluk of Shivamogga district. The footage recorded on a local CCTV camera shows that the incident took place in a different way.
KEYWORDS | Thirthahalli , A student was killed, bus ran over man , near Bejjavalli bus stand in Thirthahalli taluk, MalnaduToday ,near Bejjavalli bus stand in Thirthahalli, CCTV camera ,