SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 4 , 2024
ಡಿಸೆಂಬರ್ ತಿಂಗಳಿನಿಂದ ಅನ್ವಯಿಸುವಂತೆ ಕೇಂದ್ರ ಸರ್ಕಾರ ಕೆಲವು ನಿಯಮಗಳಲ್ಲಿ ಬದಲಾವಣೆ ತರುತ್ತಿದೆ.ಈ ನಿಯಮಗಳು 2024ರ ಡಿಸೆಂಬರ್ ನಿಂದ ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳಾಗಲಿವೆ.
SBI ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ
ಇನ್ಮುಂದೆ ಡಿಜಿಟಲ್ ಗೇಮಿಂಗ್ ಪ್ಲಾಟ್‌ಫಾರ್ಮ್ ಅಥವಾ ಟ್ರೇಡಿಂಗ್ ವಹಿವಾಟುಗಳಲ್ಲಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಯಾವುದೇ ರಿವಾರ್ಡ್ ಪಾಯಿಂಟ್ಸ್ ಸಿಗುವುದಿಲ್ಲ.

ಟ್ರಾಯ್‌ನ ಹೊಸ ನಿಯಮಗಳು
ದೇಶೀಯ ಟೆಲಿಕಾಂ ನಿಯಂತ್ರಕ TRAI ಡಿಸೆಂಬರ್ 1 ರಿಂದ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿದೆ. ಆನ್‌ಲೈನ್ ವಂಚನೆ ಮತ್ತು ಫಿಶಿಂಗ್ ತಡೆಯಲು OTP ಸೇರಿದಂತೆ ವಾಣಿಜ್ಯ ಉದ್ದೇಶದ ಮೆಸೇಜ್‌ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಪರಿಚಯಿಸುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಟ್ರಾಯ್ ಸ್ಪಷ್ಟಪಡಿಸಿದೆ.
ಆಧಾರ್ ಕಾರ್ಡ್ ಅಪ್ಡೇಟ್
ಆಧಾರ್ ಕಾರ್ಡ್ ಅಪ್‌ಡೇಟ್ ಆನ್‌ಲೈನ್‌ನಲ್ಲಿ ಡಿ.14ರವರೆಗೆ ಉಚಿತವಾಗಿ ಮಾಡಬಹುದು.ಡಿಸೆಂಬರ್ 14ರ ನಂತರ ಪ್ರತಿ ಬಾರಿ ಅಪ್ಡೇಟ್ ಮಾಡಲು 50 ರೂಪಾಯಿ ಪಾವತಿಸಬೇಕಾಗುತ್ತೆ. ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸದಂತಹ ವಿವರಗಳು ಬದಲಾಗಿದ್ದರೆ ಮಾತ್ರ ಅವುಗಳನ್ನ ಉಚಿತವಾಗಿ ಅಪ್ಡೇಟ್ ಮಾಡಬಹುದು.
SUMMARY| Just like every month, this month too, the government has made some changes, including financial and Aadhaar card updates. From December 2024 onwards, there will be some changes in terms of finances.
KEYWORDS| government, Aadhaar card updates, December, LPG Gas Cylinder,