SHIVAMOGGA | MALENADUTODAY NEWS | ಮಲೆನಾಡು ಟುಡೆ Dec 2, 2024
ಪ್ರಕರಣವೊಂದರಲ್ಲಿ ಗೃಹಿಣಿಯನ್ನ ಕೆಣಕಿ ಬಲತ್ಕಾರಕ್ಕೆ ಯತ್ನಿಸಿದಷ್ಟೆ ಅಲ್ಲದೆ, ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ ಆರೋಪವೊಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಗ್ರಾಮವೊಂದರಲ್ಲಿ ಕೇಳಿಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಐವರ ವಿರುದ್ಧ ಕೇಸ್ ಸಹ ದಾಖಲಾಗಿದೆ. ಗೃಹಿಣಿಯ ಜೊತೆ ಅಸಭ್ಯವಾಗಿ ವರ್ತಿಸಿದ ಸಂಬಂಧ ದೇವಾಲಯದಲ್ಲಿ ಪಂಚಾಯಿತಿ ನಡೆದ ಸಂದರ್ಭದಲ್ಲಿ ಆಕೆಯ ಪತಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ.
ಶಾಲೆ ಬಸ್‌ಗಳ ನಡುವೆ ಡಿಕ್ಕಿ
ಎರಡು ಶಾಲೆಯ ಬಸ್‌ಗಳ ನಡುವೆ ಡಿಕ್ಕಿಯಾದ ಘಟನೆ ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಕೆಲವು ಮಕ್ಕಳಿಗೆ ಸಣ್ಣಪುಟ್ಟ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ಖಾಸಗಿ ಶಾಲೆಯೊಂದಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಒಂದಕ್ಕೆ ಹಿಂದಿನಿಂದ ಮತ್ತೊಂದು ಶಾಲೆಯ ಬಸ್ ಡಿಕ್ಕಿಯಾಗಿದೆ. ಘಟನೆ ಸಂಬಂಧ ಪೂರ್ವ ಸಂಚಾರಿ ಪೊಲೀಸರ ಸ್ಥಳಪರಿಶೀಲನೆ ನಡೆಸಿ ವಿಚಾರಣೆ ನಡೆಸ್ತಿದ್ದಾರೆ.
ಕಾರು ಡಿಕ್ಕಿ , ವ್ಯಕ್ತಿ ಸಾವು
ಶಿವಮೊಗ್ಗದ ಹೊಳೆಹೊನ್ನೂರು ರಸ್ತೆಯಲ್ಲಿ ಆರ್ಕೆಸ್ಟ್ರಾ ನೋಡಿಕೊಂಡು ಮನೆಗೆ ಹೋಗುತ್ತಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿಯಾಗಿ ಆತ ಸಾವನ್ನಪ್ಪಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಹೊಳೆಬೆನವಳ್ಳಿಯ ತಿಮ್ಮಪ್ಪ (54) ಮೃತ ದುರ್ದೈವಿ. ಗ್ರಾಮದ ಚನ್ನಬಸವೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದೆ. ಘಟನೆ ಬೆನ್ನಲ್ಲೆ ಕಾರನ್ನ ಬೆನ್ನಟ್ಟಿದ ಗ್ರಾಮಸ್ಥರು ಮಾರ್ಗಮಧ್ಯೆದಲ್ಲಿ ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
SUMMARY | Shivamogga news update

KEY WORDS | shivamogga news,shivamogga latest news,kannada news,shivamogga today news,shivamogga,shivamogga rain news,kannada news channel,public tv kannada news,heavy rain in shivamogga news,latest kannada news,shivamogga news today,shivamogga live news,shivamogga rains news,shivamogga todays news,shivamogga news live today,shivamogga clashes news,heavy rain in shivamogga,kannada live news,shivamogga news updates,rain in shivamogga,karnataka news