water level in karnataka dams today / ಶಿವಮೊಗ್ಗದ ಯಾವ ತಾಲ್ಲೂಕುಗಳಲ್ಲಿ ಎಷ್ಟು ಮಳೆಯಾಗಿದೆ? ಭದ್ರಾ 2019.66 ಅಡಿ! ಉಳಿದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ!

Malenadu Today

water level in karnataka dams today  ಶಿವಮೊಗ್ಗ ಜಿಲ್ಲೆಯು ಸೇರಿದಂತೆ ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಗಾಜನೂರು ಬಳಿ ಇರುವ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದ್ದು ನಿನ್ನೆ ಅಂದರೆ, ಸೋಮವಾರದಿಂದಲೇ ಜಲಾಶಯದಿಂದ ನದಿಗೆ ನೀರು ಬಿಡಲಾಗುತ್ತಿದೆ. 

ಇನ್ನೂ ರಾಜ್ಯದ ಪ್ರಮುಖ ಜಲವಿದ್ಯುತ್​ಗಾರವಿರುವ ಲಿಂಗನಮಕ್ಕಿ ಜಲಾಶಯಕ್ಕೆ 9548.00 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. 6413.00 ಕ್ಯೂಸೆಕ್ಸ್​ ನೀರನ್ನು ಪೆನ್​ಸ್ಟಾಕ್ಸ್​ ಹಾಗೂ ಸ್ಲೈಸ್ ಮೂಲಕ ಹೊರಕ್ಕೆ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ ಇವತ್ತು 1765.10 ಅಡಿಯಷ್ಟಿದೆ. ಕಳೆದ ವರ್ಷ ಇದೇ ದಿನ ಡ್ಯಾಂನ ನೀರಿನ ಮಟ್ಟ 1746.70 ಅಡಿಯಷ್ಟಿತ್ತು. ಈ ನಿಟ್ಟಿನಲ್ಲಿ ಗಮನಿಸುವುದಾದರೆ, ಈ ವರ್ಷ ಹೆಚ್ಚುವರಿ ನೀರು ಸಂಗ್ರಹವಿದೆ.  ಇನ್ನೂ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ 43 ಮಿಲೀಮೀಟರ್ ಮಳೆಯಾಗಿದೆ. ಉಳಿದಂತೆ ಮಾಣಿ 69 mm ಯಡೂರು 54 mm ಹುಲಿಕಲ್ 77mm ಮಾಸ್ತಿಕಟ್ಟೆ 65mm ಚಕ್ರಾ 63  mm ಸಾವೇಹಕ್ಲು ನಲ್ಲಿ 66 ಮಿಲೀಮೀಟಮೀಟರ್​ನಷ್ಟು ಮಳೆ ಕಳೆದ 24 ಗಂಟೆಯಲ್ಲಿ ಆಗಿದೆ. 

water level in karnataka dams today : ಭದ್ರಾ ಡ್ಯಾಂನ ನೀರಿನ ಮಟ್ಟ

ಇತ್ತ ಭದ್ರಾ ಜಲಾಶಯದ ಇವತ್ತಿನ ನೀರಿನ ಮಟ್ಟ 2019.66 ಅಡಿಗಳಿಷ್ಟಿದೆ. ಕಳೆದ ವರ್ಷ ಜಲಾಶಯದ ನೀರಿನ ಮಟ್ಟ2089.08 ಅಡಿಗಳಿಷ್ಟಿತ್ತು. ಜಲಾಶಯಕ್ಕೆ 3034 ಕ್ಯೂಸೆಕ್ಸ್ ನೀರುಹರಿದು ಬರುತ್ತಿದೆ. ಒಟ್ಟಾರೆ, 500 ಕ್ಯೂಸೆಕ್ಸ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ವರಾಹಿ ಡ್ಯಾಂನಲ್ಲಿ 1412 ಕ್ಯೂಸೆಕ್ಸ್ ಒಳಹರಿವಿದ್ದು ಜಲಾಶಯದ ಮಟ್ಟ1897.11 ಅಡಿಯಷ್ಟಿದೆ. ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ 26 ಮಿಲಿಮೀಟರ್ ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ 2 ಮಿಲೀಮೀಟರ್​ ಮಳೆಯಾಗಿತ್ತು. ಭದ್ರಾವತಿ  5.4 ಎಂಎಂ, ಹೊಸನಗರ 33.1 ಎಂಎಂ, ಸಾಗರ 47.1 ಎಂಎಂ, ಶಿಕಾರಿಪುರ 16.3ಎಂಎಂ, ಶಿವಮೊಗ್ಗ ತಾಲ್ಲೂಕು 6.0ಎಂಎಂ, ತೀರ್ಥಹಳ್ಳಿ 35.00 ಮಿಲಿಮೀಟರ್​ ಮಳೆಯಾಗಿದೆ. 

 

Share This Article