theft case today : ಶಿವಮೊಗ್ಗ : ಪಿಕಪ್ನಲ್ಲಿ ಅಡಿಕೆ ತುಂಬಿಕೊಂಡು ಹೊರಟಿದ್ದ ವಾಹನದ ಚಾಲಕ, ವಾಹನದಲ್ಲಿದ್ದ ಬರೋಬ್ಬರಿ 18 ಚೀಲ ಅಡಿಕೆ ಯನ್ನು ಕದ್ದು, ಖಾಲಿ ವಾಹನವನ್ನು ಮನೆ ಮುಂದೆ ನಿಲ್ಲಿಸಿ ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಸಂಭಂದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
theft case today : ಎಫ್ಐಆರ್ ನಲ್ಲಿ ಏನಿದೆ
ದೂರುದಾರರ ಶ್ರೀಧರ್ರವರ ಪ್ರಕಾರ, ಆರೋಪಿಯು ಕಳೆದ ಒಂದು ವರ್ಷದಿಂದ ಅವರ ತಂದೆಯ ಪಿಕಪ್ ವಾಹನದಲ್ಲಿ ಕೂಲಿ ಕೆಲಸ ಮತ್ತು ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಹಾಗೆಯೇ ಜೂನ್ 30 ರಂದು ಬೆಳಿಗ್ಗೆ ಗಾಡಿಕೊಪ್ಪದಲ್ಲಿರುವ ದೂರುದಾರರ ಗೋದಾಮಿನಿಂದ ಆರೋಪಿಯು ಇದೇ ಪಿಕಪ್ ವಾಹನದಲ್ಲಿ 18 ಚೀಲ ಅಡಿಕೆ ಲೋಡ್ ಮಾಡಿಕೊಂಡು ತೀರ್ಥಹಳ್ಳಿಗೆ ಹೊರಟಿದ್ದ. ತೀರ್ಥಹಳ್ಳಿಯ ಕೃಷಿಕರ ಸೊಸೈಟಿಯಲ್ಲಿ ಅಡಿಕೆ ಲೋಡ್ ಮಾಡಿಕೊಂಡು, ಇ-ವೇ ಬಿಲ್ ಮತ್ತು ಎಪಿಎಂಸಿ ಪರ್ಮಿಟ್ ಮಾಡಿಸಿಕೊಂಡು, ತೀರ್ಥಹಳ್ಳಿ ಚೆಕ್ ಪೋಸ್ಟ್‌ನಲ್ಲಿ ಪರಿಶೀಲನೆ ಮಾಡಿಸಿಕೊಂಡು ಆತ ಅಲ್ಲಿಂದ ಹೊರಟಿದ್ದನು.
theft case today ನಂತರ ಮಧ್ಯಾಹ್ನ 2:30 ಗಂಟೆಗೆ ದೂರುದಾರರು ಕರೆ ಮಾಡಿದಾಗ, ಆರೋಪಿಯು ಸಿರಿಗೆರೆಯಲ್ಲಿ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ, ಬರುತ್ತೇನೆ ಎಂದು ಹೇಳಿದ್ದನು. ಸಂಜೆ 4:30 ಗಂಟೆಗೆ ಮತ್ತೆ ಕರೆ ಮಾಡಿದಾಗ, ಪೊಲೀಸ್ ಪರಿಶೀಲನೆ ತಡವಾದ್ದರಿಂದ ಆಯನೂರು ಬಳಿ ಬರುತ್ತಿರುವುದಾಗಿ ತಿಳಿಸಿದ್ದನು.

ರಾತ್ರಿ 9:30 ಗಂಟೆಯಾದರೂ ಸಹ ಆರೋಪಿ ಫೋನ್ನ್ನು ಪಿಕ್ ಮಾಡಲೇ ಇಲ್ಲ. ವಾಹನ ಬಾರದ ಕಾರಣ, ದೂರುದಾರರು ರಾತ್ರಿ ಮತ್ತು ಮರುದಿನ ಬೆಳಿಗ್ಗೆ ಎಲ್ಲಾ ಕಡೆ ಹುಡುಕಾಡಿದರೂ 1197.8 ಕೆ.ಜಿ. ತೂಕದ, ₹5,ಲಕ್ಷ 46 ಸಾವಿರ ಮೌಲ್ಯದ 18 ಚೀಲ ಅಡಿಕೆ ಮತ್ತು ವಾಹನ ಪತ್ತೆಯಾಗಿರಲಿಲ್ಲ.
ಮಾರನೇ ದಿನ ಜುಲೈ 1, ರಂದು ಗಾಡಿಕೊಪ್ಪ ಗ್ರಾಮದ ಪುರದಾಳು ರಸ್ತೆಯಲ್ಲಿ ಕೊಟ್ರೇಶ್ ಬಾಡಿಗೆ ಇದ್ದ ಮನೆಯ ಬಳಿ ಪಿಕಾಪ್ ವಾಹನ ಇರುವುದು ತಿಳಿದುಬಂದಿದೆ. ಸ್ಥಳಕ್ಕೆ ಹೋಗಿ ನೋಡಿದಾಗ, ವಾಹನ ಮಾತ್ರ ಇದ್ದು, ಆರೋಪಿ ವಾಹನದಲ್ಲಿದ್ದ 18 ಚೀಲ ಅಡಿಕೆಯನ್ನು ಮೋಸದಿಂದ ಬೇರೆ ಕಡೆ ಇಳಿಸಿ, ಖಾಲಿ ವಾಹನವನ್ನು ಮನೆ ಮುಂದೆ ನಿಲ್ಲಿಸಿ ವಂಚನೆ ಮಾಡಿ ಹೋಗಿರುವುದು ಕಂಡುಬಂದಿದೆ. ಇದರಿಂದಾಗಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.