shivamogga police save children in holehonnuru : ಶಿವಮೊಗ್ಗ, August 09 2025: malenadu today news : ಮನೆ ಮನೆಯ ಸಮಸ್ಯೆಗಳನ್ನು ಅವರ ಬಳಿಗೆ ಹೋಗಿ ಆಲಿಸುವ ಹಾಗೂ ಆದಷ್ಟು ಇತ್ಯರ್ಥ ಪಡಿಸುವ ಆಲೋಚನೆಯೊಂದಿಗೆ ರಾಜ್ಯ ಪೊಲೀಸ್ ಇಲಾಖೆಯ ಯೋಜನೆಯ ಅಡಿಯಲ್ಲಿ ಶಿವಮೊಗ್ಗ ಪೊಲೀಸರು ಸಹ ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಮನೆಯವರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.
ಇದನ್ನು ಸಹ ಓದಿ : ಕಾಂತಾರ ಚಾಪ್ಟರ್ 1 ನಲ್ಲಿ ಕನಕವತಿಯಾಗಿ ಈ ನಟಿ ಎಂಟ್ರಿ : ಯಾರಿದು https://malenadutoday.com/kantara-movie-kanakavati/
ಮನೆ ಮನೆಗೆ ಪೊಲೀಸ್
ಒಂದು ಕಪ್ ಟೀ ಅಥವಾ ಹೇಗಿದ್ದೀರಿ ಎಂಬ ಬಾಯಿ ಮಾತಿನೊಂದಿಗೆ ಆರಂಭವಾಗುತ್ತಿರುವ ಈ ಪೊಲೀಸ್ ಕುಶಲೋಪರಿಯಲ್ಲಿ ಇಬ್ಬರು ಪುಟ್ಟ ಮಕ್ಕಳಿಗೆ ಇದೀಗ ಆಸರೆ ದೊರೆತಿದೆ ಎನ್ನುವುದು ವಿಶೇಷ. ಹೌದು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಪೊಲೀಸರಿಂದಾಗಿ ಇಬ್ಬರು ಮಕ್ಕಳು ಇದೀಗ ಸರ್ಕಾರದ ಆಶ್ರಯವನ್ನು ಪಡೆದುಕೊಂಡಿದ್ದಾರೆ.
ಹೊಳಹೊನ್ನೂರು ಪೊಲೀಸ್ ಠಾಣೆ
ಆ ಮಕ್ಕಳದ್ದು ವಿಧಿಬರಹ ಅನ್ನದೆ ಬೇರೆ ವಿಧಿಯಿಲ್ಲ ಏಕೆಂದರೆ, ಅವರ ಒಂದು ವರ್ಷದೊಳಗೆ ಇಬ್ಬರು ಪುಟ್ಟ ಮಕ್ಕಳು ತಮ್ಮ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಆಡುವ ವಯಸ್ಸಿನಲ್ಲಿ ಆಸರೆ ಕಳೆದುಕೊಂಡ ಮಕ್ಕಳನ್ನು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಅಡಿಯಲ್ಲಿ ಸ್ಥಳವೊಂದಕ್ಕೆ ಹೋಗಿದ್ದ ಕ್ರೈಂ ಹೆಡ್ ಕಾನ್ಸ್ಸ್ಟೇಬಲ್ ಆನಂದ್ ಹೆಚ್ ವಿಯವರು ಗಮನಿಸಿದ್ದಾರೆ.
ಇದನ್ನು ಸಹ ಓದಿ : 24 ರಂದು ಕರ್ನಾಟಕ ಸ್ಟಾರ್ ಸಿಂಗರ್ ಸೀಜನ್ 02 ಕಾರ್ಯಕ್ರಮ : ಯಾರೆಲ್ಲಾ ಭಾಗವಹಿಸಬಹುದು : ಪ್ರಥಮ ಬಹುಮಾನ ಎಷ್ಟು ಗೊತ್ತಾ? https://malenadutoday.com/karnataka-star-singer-audition-shivamogga/

ಶಿವಮೊಗ್ಗ ಪೊಲೀಸ್
ಇಬ್ಬರು ಮಕ್ಕಳ ಬಗ್ಗೆ ಆಲಿಸಿದ ಅವರ ಮನಸ್ಸು ಸಹ ಕರಗಿ ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಮರುಕ್ಷಣವೇ ಅಲರ್ಟ್ ಆದ ಶಿವಮೊಗ್ಗ ಪೊಲೀಸ್ ಇಲಾಖೆಯ ಅಧಿಕಾರಿಗಳು ಪೋಷಕತ್ವದಿಂದ (guardianship) ವಂಚಿತರಾಗಿರುವ ಮಕ್ಕಳಿಗೆ ಆಸರೆ ಕಲ್ಪಿಸುವ ದೃಷ್ಟಿಯಿಂದ ಭದ್ರಾವತಿಯ ಡಾನ್ ಬೋಸ್ಕೋ ಸಂಸ್ಥೆಯ ರಂಗನಾಥ್ ಅವರನ್ನು ಸಂಪರ್ಕಿಸಿದರು.
ಇದನ್ನು ಸಹ ಓದಿ : ವರಮಹಾಲಕ್ಷ್ಮೀ ಹಬ್ಬ!ವೃತ ಆಚರಣೆ, ಪೂಜೆ ಹೇಗೆ? https://malenadutoday.com/celebrate-varamahalakshmi-habba-2025/
ಆ ಬಳಿಕ ಅಂತಿಮವಾಗಿ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (Child Welfare Committee) ಮೂಲಕ ಅವರಿಗೆ ಆಶ್ರಯ ಒದಗಿಸಿದ್ದಾರೆ. ಈ ಮಾನವೀಯ ಕಾರ್ಯವು ‘ಮನೆ ಮನೆಗೆ ಪೊಲೀಸ್’ ಯೋಜನೆಯ ಮೂಲ ಉದ್ದೇಶಕ್ಕೆ ಸಾರ್ಥಕತೆ (meaningful) ತಂದಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗದ ‘ಮನೆ ಮನೆಗೆ ಪೊಲೀಸ್’ ಯೋಜನೆಯಡಿ, ಹೊಳೆಹೊನ್ನೂರು ಪೊಲೀಸರು ಪೋಷಕರನ್ನು ಕಳೆದುಕೊಂಡ ಇಬ್ಬರು ಮಕ್ಕಳಿಗೆ ಆಸರೆಯಾಗಿ ನಿಂತಿದ್ದಾರೆ. ಈ ಮಾನವೀಯ ಕಾರ್ಯದ ಬಗ್ಗೆ ಇನ್ನಷ್ಟು ತಿಳಿಯಿರಿ.
shivamogga police save children in holehonnuru
ಶಿವಮೊಗ್ಗ ಪೊಲೀಸ್, ಅನಾಥ ಮಕ್ಕಳಿಗೆ ಆಸರೆ, ಮನೆ ಮನೆಗೆ ಪೊಲೀಸ್, ಹೊಳೆಹೊನ್ನೂರು, ಮಾನವೀಯ ಕಾರ್ಯ, Shivamogga Police, orphan children, Police initiative, Don Bosco, Child Welfare Committee, Holehonnur Police Station.
ಸೂಚನೆ: ಈ ವರದಿಯನ್ನು ಶಿವಮೊಗ್ಗ ಪೊಲೀಸ್ ಪ್ರಕಟಣೆಯನ್ನು ಆಧರಿಸಿ ವರದಿ ಮಾಡಲಾಗಿದೆ, ಮಕ್ಕಳ ಯಾವುದೇ ವೈಯಕ್ತಿಕ ಮಾಹಿತಿ ನೀಡಲಾಗುವುದಿಲ್ಲ