Minister santosh lad ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಈಗಾಗಲೇ ಎಸ್ಐಟಿ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿಯುವವರೆಗೆ ಕಾಯಬೇಕಿದೆ ಎಂದು ಅವರು ಹೇಳಿದರು.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾವುಗಳ ಬಗ್ಗೆ ಪ್ರತಿದಿನ ತನಿಖೆ ನಡೆಯುತ್ತಿದೆ, ಆದರೆ ಅದರ ಬಗ್ಗೆ ನನಗೆ ಸ್ಪಷ್ಟ ಚಿತ್ರಣವಿಲ್ಲ. ಎಸ್ಐಟಿ ತನಿಖೆ ಮುಗಿದ ನಂತರವೇ ಏನಾಗುತ್ತದೆ ಎಂದು ಕಾದು ನೋಡಬೇಕು” ಎಂದರು.
Minister santosh lad ಪ್ರಹ್ಲಾದ್ ಜೋಶಿ ವಿರುದ್ಧ ಸಂತೋಷ್ ಲಾಡ್ ವಾಗ್ದಾಳಿ
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಂತೋಷ್ ಲಾಡ್, “ಜೋಶಿ ಅವರಿಗೆ ಅನುಕೂಲವಾಗುವ ವಿಚಾರಗಳನ್ನಷ್ಟೇ ಅವರು ಮಾತನಾಡುತ್ತಾರೆ. ಈ ಪ್ರಕರಣ ‘ಪ್ಲಾಂಟೆಡ್’ ಎಂದು ಹೇಳಲು ಅವರ ಬಳಿ ದಾಖಲೆಗಳಿದ್ದರೆ ತಂದು ಕೊಡಲಿ. ಅವರ ಬಳಿ ಸಿಬಿಐ ಸಹ ಇದೆ, ಹಾಗಾಗಿ ಅವರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
Minister santosh lad ಹಾಗೆಯೇ ಬಿಜೆಪಿಯವರು ಕೇವಲ ಆಯ್ದ ವಿಚಾರಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಜಿಡಿಪಿ, ತಲಾ ಆದಾಯದ ಬಗ್ಗೆ ಮಾತನಾಡುವುದಿಲ್ಲ. ಮೇಘಾಲಯದಲ್ಲಿ 41 ಸಾವಿರ ಟನ್ ಕಲ್ಲಿದ್ದಲು ನಾಪತ್ತೆಯಾಗಿದ್ದರೂ, ಮಳೆ ಬಂದು ಕೊಚ್ಚಿ ಹೋಗಿದೆ ಎಂದು ಹೇಳುತ್ತಾರೆ. ರೈತರು ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಗಳ ಬಗ್ಗೆಯೂ ಅವರು ಮಾತನಾಡುವುದಿಲ್ಲ. ಅವರಿಗೆ ವೋಟಿಗಾಗಿ ಹಿಂದೂ-ಮುಸ್ಲಿಂ ವಿಚಾರ ಅಷ್ಟೇ ಬೇಕಾಗಿದೆ. ರಾಮಮಂದಿರವನ್ನು ಸಹ ಜನರ ದುಡ್ಡಿನಲ್ಲಿ ನಿರ್ಮಿಸಿದ್ದಾರೆ. ಹಿಂದುಗಳಿಗಾಗಿ ಅವರು ಯಾವುದೇ ಪ್ರತ್ಯೇಕ ಯೋಜನೆಗಳನ್ನು ತಂದಿಲ್ಲ. ಬಿಜೆಪಿಯವರ ಮನೆಯಲ್ಲಿ ಮಾತ್ರ ಬಂಗಾರದ ತಟ್ಟೆ ಇದೆಯೇ ಹೊರತು ಹಿಂದುಗಳ ಮನೆಯಲ್ಲಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.