Jp story ಶರಾವತಿ ಮುಳುಗಡೆ ಸಂತ್ರಸ್ಥರ ಏಳು ದಶಕದ ಸೇತುವೆ ಬೇಡಿಕೆ ಈಡೇರಿದ ನಂತರ, ಸಂತ್ರಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ. ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡ ನಂತರ, ಸಿಗಂದೂರು ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿದೆ. ಸೇತುವೆ ನೋಡಲು ಸಾಗರ ತೀರ್ಥಹಳ್ಳಿ, ಸೊರಬ,ಶಿಕಾರಿಪುರ ತಾಲೂಕಿನ ಭಾಗಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇತುವೆಯತ್ತ ದೌಡಾಯಿಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ಹಾಗು ಸಂಜೆ ಹೊತ್ತು ಸೇತುವೆಗೆ ಭೇಟಿ ನೀಡುವ ಪ್ರವಾಸಿಗರು. ಸೀದಾ ಸಿಗಂದೂರು ದೇವಸ್ಥಾನಕ್ಕೆ ಹೋಗಿ ದೇವಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ದೇವಸ್ಥಾನಕ್ಕೆ ನೇರವಾಗಿ ಬರುವ ಮೂಲ ಭಕ್ತರ ಸಂಖ್ಯೆ ಒಂದೆಡೆಯಾದರೆ, ಮತ್ತೊಂದೆಡೆ ಸೇತುವೆ ನೋಡಲು ಬರುವ ಪ್ರವಾಸಿಗರಿಂದಾಗಿ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಶೇಕಡಾ 20 ರಷ್ಟು ಹೆಚ್ಚಳವಾಗಿದೆ.
Jp story : ರಾತ್ರಿ 9 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ
ಇಷ್ಟು ವರ್ಷಗಳ ಕಾಲ ಸಂಜೆ ಏಳುವರೆ ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.ರಾತ್ರಿಯ ವೇಳೆ ಲಾಂಚ್ ಪ್ರಯಾಣ ಸೇವೆ ಇಲ್ಲದ ಕಾರಣಕ್ಕೆ ರಾತ್ರಿಯವರೆಗೆ ಭಕ್ತರಿಗೆ ದರ್ಶನ ಭಾಗ್ಯವಿರಲಿಲ್ಲ. ಈಗ ಸೇತುವೆಯಾದ ನಂತರ ರಾತ್ರಿ 9 ಗಂಟೆಯವರೆಗೂ ಚೌಡೇಶ್ವರಿ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ಅವಕಾಶ ಕಲ್ಪಿಸಿಕೊಟ್ಚಿದೆ. ಭಕ್ತರು ಇದರ ಉಪಯೋಗ ಪಡೆಯಬಹುದಾಗಿದೆ.
ಪ್ರತಿ ಅರ್ಧ ಗಂಟೆಗೆ ಸಿಗಂದೂರಿಗೆ ಬಸ್


ಇಷ್ಟು ವರ್ಷ ಸಿಗಂದೂರಿಗೆ ನೇರವಾಗಿ ಬಸ್ ವ್ಯವಸ್ಥೆ ಇರಲಿಲ್ಲ. ಈಗ ಸೇತುವೆಯಾದ ನಂತರ ಸಾಗರದಿಂದ ಪ್ರತಿ ಅರ್ಧಗಂಟೆಗೊಮ್ಮೆ ಸಿಗಂದೂರಿಗೆ ಬಸ್ ಸೇವೆ ಕಲ್ಪಿಸಲಾಗಿದೆ. ಖಾಸಗಿ ಮತ್ತು ಸರ್ಕಾರಿ ಬಸ್ ಗಳ ಸೇವೆ ಲಭ್ಯವಿರುವುದರಿಂದ ಭಕ್ತರು ಈಗ ನೇರವಾಗಿ ಅಲ್ಪ ಸಮಯದಲ್ಲಿ ಸಿಗಂದೂರು ತಲುಪಬಹುದಾಗಿದೆ. ಭಕ್ತರು ಬಸ್ ಬಳಸಿಕೊಂಡು ಬಂದರೆ ಹಣದ ಉಳಿತಾಯವೂ ಆಗುತ್ತದೆ.
Jp story : ಸೇತುವೆಯಲ್ಲಿ ರಭಸದ ಗಾಳಿ ಮಂಜು ಮುಸುಕಿದ ವಾತಾವರಣ , ಪ್ರವಾಸಿಗರು ನಿಧಾನವಾಗಿ ಸಂಚರಿಸಿ
ಸಿಗಂದೂರು ಸೇತುವೆ ನೋಡಲು ಬಹು ಸುಂದರವಾಗಿದೆ. ಸೌಂದರ್ಯ ಸವಿಯುವ ಮೂಡಿನಲ್ಲಿ ವಾಹನವನ್ನು ಸೇತುವೆ ಮೇಲೆ ವೇಗವಾಗಿ ಚಲಾಯಿಸಿದರೆ ಅಪಾಯ ತಪ್ಪಿದ್ದಲ್ಲ. ಸೇತುವೆ ಮೇಲೆ ರಭಸದ ಗಾಳಿ ಬೀಸುತ್ತಲೇ ಇರುತ್ತದೆ. ತೂಗು ಸೇತುವೆಯಾಗಿರುವುದರಿಂದ ಬಾರಿ ವಾಹನ ಸಂಚರಿಸಿದರೆ ಸೇತುವೆ ಕೂಡ ಶೇಕ್ ಆಗುತ್ತದೆ. ಇನ್ನು ಬೆಳಗಿನ ಹೊತ್ತಿನಲ್ಲಿ ಹಿನ್ನೀರಿನಲ್ಲಿ ಮಂಜು ಮುಸುಕಿದ ವಾತಾವರಣವಿರುತ್ತದೆ. ರಸ್ತೆ ತುಂಬಾ ಕ್ಲಿಯರ್ ಆಗಿರುವುದಿಲ್ಲ. ಎದುರಿಗೆ ಬರುವ ವಾಹನಗಳನ್ನು ತಕ್ಷಣಕ್ಕೆ ಗುರುತಿಸುವುದು ಕಷ್ಟವಾಗುತ್ತದೆ.,ಪಾರ್ಕಿಂಗ್ ಲೈಟ್ ಹಾಕಿಕೊಂಡು ವಾಹನ ಸವಾರರು ಸಂಚರಿಸಿದರೆ ಒಳ್ಳೆಯದು. ಈಗ ಮಳೆಯೂ ಹೆಚ್ಚಾಗಿರುವುದರಿಂದ ಪಾರದರ್ಶಕ ಚಾಲನೆಗೆ ಕೊಂಚ ತೊಡಕಿದೆ. ಇವೆಲ್ಲವನ್ನು ಅರಿತುಕೊಂಡು ಸೇತುವೆ ಮೇಲೆ ಪಯಣಿಸಿದರೆ ಒಳಿತು.
