House theft ಮನೆಗಳ್ಳನ ಹೆಡೆಮುರಿ ಕಟ್ಟಿದ ರಿಪ್ಪನ್‌ಪೇಟೆ ಪೊಲೀಸರು, ಕಳ್ಳತನದ ಮಾಲು ವಶಕ್ಕೆ
House theft : ರಿಪ್ಪನ್‌ಪೇಟೆ: ಪಟ್ಟಣದ ಕೋಟೆತಾರಿಗ ಗ್ರಾಮದಲ್ಲಿ ನಡೆದ ಮನೆಗಳ್ಳತನ ಪ್ರಕರಣದ ಆರೋಪಿಯನ್ನು ರಿಪ್ಪನ್‌ಪೇಟೆ ಪೊಲೀಸರು ಕೇವಲ ನಾಲ್ಕು ದಿನಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 2ರಂದು ಕೋಟೆತಾರಿಗ ಗ್ರಾಮದ ದಾನಮ್ಮ ಅವರ ಮನೆಯ ಬೀಗ ಮುರಿದು ನಗದು ಮತ್ತು ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಘಟನೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆಯೇ, ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ ಮತ್ತು ಸಿಪಿಐ ಗುರಣ್ಣ ಹೆಬ್ಬಾಳ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಜು ರೆಡ್ಡಿ ನೇತೃತ್ವದ ಪೊಲೀಸ್ ತಂಡ ತನಿಖೆ ಆರಂಭಿಸಿತು.
ಪೊಲೀಸರು ತೀವ್ರ ಶೋಧ ನಡೆಸಿದಾಗ, ಖಚಿತ ಮಾಹಿತಿ ಆಧರಿಸಿ ಕಣಬಂದೂರು ಗ್ರಾಮದ ಸಂತೋಷ್ (37) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ₹4,500 ನಗದು, 8.5 ಗ್ರಾಂ ಚಿನ್ನಾಭರಣ, 10 ಗ್ರಾಂ ಬೆಳ್ಳಿ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್‌ಗಳಾದ ರಾಮಚಂದ್ರ, ಅಶೋಕ್ ಹಾಗೂ ಕಾನ್ಸ್‌ಟೇಬಲ್‌ಗಳಾದ ಸಂತೋಷ್ ಕೊರವರ, ಉಮೇಶ್, ಅವಿನಾಶ್ ಪಾಲ್ಗೊಂಡಿದ್ದರು.
