Giant Python Found in Car ಶಿವಮೊಗ್ಗ, malenadu today news : August 18 2025 ಶಿವಮೊಗ್ಗ: ನಗರದ ಗೋಪಾಲದ ಸ್ವಾಮಿ ವಿವೇಕಾನಂದ ಬಡಾವಣೆಯ ಮನೆಯೊಂದರಲ್ಲಿ ನಿಲ್ಲಿಸಿದ್ದ ಕಾರಿನ ಬಂಪರ್‌ನೊಳಗೆ ಅಡಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗತಜ್ಞ ಸ್ನೇಕ್ ಕಿರಣ್ ಅವರು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಸರಿ ಸುಮಾರು 7 ಅಡಿ ಉದ್ದ ಮತ್ತು 6 ಕೆಜಿ ತೂಕದ ಈ ಹೆಬ್ಬಾವು ಕಾರಿನ ಹಿಂಭಾಗದ ಬಂಪರ್ ಒಳಗೆ ಸೇರಿಕೊಂಡಿತ್ತು. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ತಕ್ಷಣವೇ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಮನೆಯವರು ಕೂಡಲೇ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್, ಮೆಕ್ಯಾನಿಕ್ ಸಹಾಯ ಪಡೆದು ಕಾರಿನ ಬಂಪರ್ ಅನ್ನು ತೆರೆಸಿದ್ದಾರೆ. ನಂತರ, ಅತ್ಯಂತ ಎಚ್ಚರಿಕೆಯಿಂದ ಮತ್ತು ಸುರಕ್ಷಿತವಾಗಿ ಹಾವನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ. ಈ ಕಾರ್ಯಾಚರಣೆ ಸ್ಥಳೀಯರಲ್ಲಿ ಆತಂಕ ಮತ್ತು ಅಚ್ಚರಿ ಎರಡನ್ನೂ ಮೂಡಿಸಿತ್ತು.
Giant Python Found in Car
