ಮಲೆನಾಡು ಟುಡೆ ಸುದ್ದಿ, ಬೆಂಗಳೂರು, ಸೆಪ್ಟೆಂಬರ್ 6 2025 : ಶಿವಮೊಗ್ಗದಲ್ಲಿಯೇ ಟ್ರಾಫಿಕ್ ಪೊಲೀಸರು ಹೆಚ್ಚು ಫೈನ್ ಹಾಕ್ತಾರೆ, ಸರ್ಕಲ್ಗಳಲ್ಲಿ ಕ್ಯಾಮರಾಗಳು ಫೋಟೋ ಹೊಡೆದು ಫೈನ್ ಚೀಟಿ ಮನೆಗೆ ಕಳಿಸ್ತಾರೆ ಎನ್ನುವ ಜನರ ಆರೋಪಗಳ ನಡುವೆ ಸಂಚಾರಿ ಪೊಲೀಸರ ITMS- Intelligent Transport Management System ಸಿಎಂ ಸಿದ್ದರಾಮಯ್ಯರಿಗೂ ದಂಡ ಹಾಕಿದೆ. ಅದು ಕೂಡ ಏಳು ಸಲ.
ಹೌದು, ಸಿಎಂ ಸಿದ್ದರಾಮಯ್ಯ ಬಳಸುವ ಕಾರು 2024 ರಿಂದೀಚೆಗೆ ಏಳು ಬಾರಿ ಸಂಚಾರ ನಿಯಮ ಉಲ್ಲಂಘಿಸಿದೆ. ಸರ್ಕಲ್ಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ದೃಶ್ಯ ಸೆರೆಯಾಗಿದೆ. ಏಳು ಪ್ರಕರಣಗಳ ಪೈಕಿ ಆರು ಉಲ್ಲಂಘನೆ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಆಗಿವೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಶೇ 50ರ ರಿಯಾಯಿತಿ ನೀಡಿ ದಂಡ ವಿನಾಯಿತಿ ನೀಡಲಾಗಿದ್ದು, ಈ ಅವಕಾಶದಡಿ ಸಿಎಂ ಕಡೆಯಿಂದ ದಂಡ ಪಾವತಿ ಮಾಡಲಾಗಿದೆ ಎಂದು ಸಹ ಪತ್ರಿಕೆಯೊಂದು ವರದಿ ಮಾಡಿದೆ. ಇದೆಲ್ಲದರ ನಡುವೆ ಸಿದ್ದರಾಮಯ್ಯ ಅವರು ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಾಗ ಸೀಟ್ ಬೆಲ್ಟ್ ಧರಿಸದೇ ಸಂಚರಿಸುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

CM Siddaramaiahs Car Fined 7 Times for Traffic Violations
Karnataka Chief Minister Siddaramaiah’s official car has been fined seven times since 2024 for traffic violations, traffic violations, traffic fines, seat belt rule, Bengaluru traffic police, 50% discount on traffic fines , ದಂಡ, ಸೀಟ್ ಬೆಲ್ಟ್, ಬೆಂಗಳೂರು ಟ್ರಾಫಿಕ್ ಪೊಲೀಸ್,