Car accident : ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಕುಡಿದು ವಾಹನ ಚಲಾಯಿಸುತ್ತಿದ್ದ ಚಾಲಕನೊಬ್ಬ ಸರಣಿ ಅಪಘಾತ ಮಾಡಿದ್ದಾನೆ. ಇದರಿಂದ ರಸ್ತೆಯುದ್ದಕ್ಕೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಕಾರು, ಕೊನೆಗೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಜಖಂ ಆಗಿದೆ. (Catastrophic)
ಈ ಘಟನೆ ಶಿವಮೊಗ್ಗದ ಮಹಾವೀರ ವೃತ್ತದ ಬಳಿ ನಡೆದಿದೆ. ಆರೋಪಿ ಹೊನ್ನಾಳಿಯ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದುದು ಗೊತ್ತಾಗಿದೆ
ಗೋಪಿ ವೃತ್ತದ ಅಂಬಿಕಾ ಬುಕ್ ಸ್ಟೋರ್ ಬಳಿ ಒಂದು ವಾಹನಕ್ಕೆ ಡಿಕ್ಕಿ ಹೊಡೆದ ನಂತರ, ಬಾಳರಾಜ್ ಅರಸ್ ರಸ್ತೆಯಲ್ಲಿ ಒಟ್ಟು ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಮಹಾವೀರ ವೃತ್ತದಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಅಪ್ಪಳಿಸಿದ್ದರಿಂದ ಕಾರಿನ ಬಲ ಚಕ್ರ ಮುರಿದು ಸ್ಥಳದಲ್ಲೇ ನಿಂತಿದೆ.
Car accident
TAGGED:car accident

