Brahmin Development Board
ಬೆಂಗಳೂರು: ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ ಮೂವರು ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡಿದೆ. ಈ ಸದಸ್ಯರಲ್ಲಿ ಶಿವಮೊಗ್ಗದ ಪಿ.ಎಂ. ಮಾಲ್ತೇಶ್ ಅವರು ಕೂಡ ಸೇರಿದ್ದು, ಈ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಚಿಂತಾಮಣಿಯ ಸಿ.ಎನ್. ನಾಗೇಶ್, ಗದಗಿನ ಗುರುರಾಜ ವಾದಿರಾಜ ಬಳಗಾನೂರು, ಮತ್ತು ಶಿವಮೊಗ್ಗದ ಪಿ.ಎಂ. ಮಾಲ್ತೇಶ್ ಅವರನ್ನು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಹಾಮಂಡಳಿಯ ನಾಮನಿರ್ದೇಶಕ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.