Banjara community protest :ಬಂಜಾರ ಸಮುದಾಯದವರು ಒಳ ವರ್ಗೀಕರಣವನ್ನು ವಿರೋದಿಸಿ ಸೆಪ್ಟಂಬರ್ 12 ರಿಂದ ನಗರದಲ್ಲಿ ವಿವಿಧ ರೀತಿಯ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ನಿನ್ನೆ ಶಿವಮೂರ್ತಿ ಸರ್ಕಲ್ ಮುಂದೆ ಶವದ ಅನುಕು ಪ್ರದರ್ಶನನ್ನು ಮಾಡಿದ್ದ ಪ್ರತಿಭಟನಾಕಾರರು ಇಂದು ಅರೆಬೆತ್ತಲೆ ಪ್ರತಿಭಟನೆಯನ್ನು ಮಾಡಿದ್ದಾರೆ.
ಪ್ರತಿಭಟನಾಕಾರರು ನಗರದ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರ ಪ್ರಕಾರ, ನಾಗಮೋಹನ್‌ದಾಸ್ ವರದಿಯಲ್ಲಿರುವ ಶಿಕ್ಷಣ, ಉದ್ಯೋಗ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಅಂಕಿಅಂಶಗಳು ಹಲವು ಸಮುದಾಯಗಳಲ್ಲಿ ಅನುಮಾನ ಮೂಡಿಸಿವೆ. ಸರ್ಕಾರವು ಪರಿಶಿಷ್ಟ ಜಾತಿಯ ನಿಖರ ಜನಸಂಖ್ಯೆಯ ಅಂಕಿಅಂಶಗಳನ್ನು ನೀಡದೆ, ಅಪೂರ್ಣ ವರದಿಯನ್ನೇ ಸಣ್ಣಪುಟ್ಟ ಬದಲಾವಣೆಯೊಂದಿಗೆ ಜಾರಿಗೆ ತಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ದೂರಿದ್ದಾರೆ. ಬಂಜಾರ ಸಮುದಾಯಕ್ಕೆ 4% ಮೀಸಲಾತಿ ನಿಗದಿಪಡಿಸಿರುವುದು ಅನ್ಯಾಯ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ.
Banjara community protest
