Monday, 28 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಮೂಳೆ ಇಲ್ಲದ ಮಾನವ ರೈತನಿಲ್ಲದ ದೇಶ ಎರಡು ಒಂದೆ | ಥಾವರ್‌ ಚಂದ್‌ ಗೆಹ್ಲೋಟ್

131
Last updated: January 23, 2025 1:29 am
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 22, 2025 ‌

ಶಿವಮೊಗ್ಗ|  ಮೂಳೆ ಇಲ್ಲದಿದ್ದರೆ ನಾವು ಹೇಗೆ ಉಪಯೋಗಕ್ಕೆ ಬರುವುದಿಲ್ಲವೋ ಅದೇ ರೀತಿ ರೈತನಿಲ್ಲದ ದೇಶ ಉಪಯೋಗಕ್ಕೆ ಬರುವುದಿಲ್ಲ ರೈತ ದೇಶದ ಬೆನ್ನೆಲುಬು ಎಂದು ರಾಜ್ಯ ಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ತಿಳಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ಬುಧವಾರ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಇಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಸುಗ್ಗಿ ಸಂಭ್ರಮದ ಅಧ್ಯಕ್ಷತೆ ವಹಿಸಿದರು ಹಾಗೆಯೇ ಕಾಗೋಡು ತಿಮ್ಮಪ್ಪರಿಗೆ ಡಾಕ್ಟರೇಟ್‌ ಪದವಿ ಹಾಗೂ ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರಧಾನ ಮಾಡಿದರು. ಈ ವೇಳೆ ಮಾತನಾಡಿದ ಅವರು ಕಾಗೋಡು ಅವರಿಗೆ ಕುವೆಂಪು ವಿವಿಯಲ್ಲಿ  ಹಾಗೂ ಇಲ್ಲಿ ಗೌರವ ಡಾಕ್ಟರೇಟ್‌ ಅನ್ನು ಪ್ರಆನ ಮಾಡಿದ್ದು ಖುಷಿ ತಂದಿದೆ. ಅವರು ಮುಂದೆಯೂ ಇದೇ ರೀತಿಯ ಉತ್ತಮ ಕಾರ್ಯವನ್ನು ಮಾಡಲಿ ಎಂದರು. ಹಾಗೆಯೇ ಇಂದು ಚಿನ್ನದ ಪದಕ ಹಾಗೂ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ, ಇದು ನಿಮ್ಮ ಜೀವನದ ಅವಿಸ್ಮರಣೀಯ ಕ್ಷಣ ಇದು ನಿಮ್ಮ  ಕುಟುಂಬಕ್ಕೂ ಸಂತಸದ ಕ್ಷಣ. ಎಲ್ಲರಿಗು ಒಳ್ಳೆಯದಾಗಲಿ ಎಂದರು.

car decor
NES Head Office, Balaraja Urs Road, Shivamogga

ಈ ಪದವಿ ಪ್ರದಾನ ಸಮಾರಂಭ ನಿಮ್ಮ ಸಮಾಜ, ದೇಶ, ಕೃಷಿ ಬಗ್ಗೆ ನಿಮ್ಮ ಜವಾಬ್ದಾರಿ ಬಗ್ಗೆ ತಿಳಿಸುತ್ತದೆ.‌ ಮೂಳೆ ಇಲ್ಲದಿದ್ದರೆ ಹೇಗೆ ನಾವು ಉಪಯೋಗಕ್ಕೆ ಇಲ್ಲವೊ‌ ಅದೇ ರೀತಿ ರೈತರಿಲ್ಲದಿದ್ದರೆ ದೇಶ ಉಪಯೋಗಕ್ಕೆ ಬರುವುದಿಲ್ಲ..ನೀವು ಪಡೆದ ಜ್ಞಾನದ ಮೂಲಕ ರೈತರಿಗೆ ನೆರವಾಗಿ ಹಾಗೆಯೇ ಕೃಷಿಯನ್ನು ಇನ್ನು ಮುಂದೆ ತೆಗೆದುಕೊಂಡು ಹೋಗಿ. ಈ ಕ್ಷೇತ್ರ ನಿರುದ್ಯೋಗ, ಹಸಿವು ಮೊದಲಾದವುಗಳಿಂದ ಹೊರಬರಲು ಇದು ಸಹಾಯಕವಾಗುತ್ತದೆ.ಕೃಷಿ ಮತ್ತು ತೋಟಗಾರಿಕೆಯಲ್ಲಿ ತಂತ್ರಜ್ಞಾನದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳು ಸಮಾಜ, ರೈತರ ಪರ ಕೆಲಸ ಮಾಡಿ. ಕಡಿಮೆ ವೆಚ್ಚದಲ್ಲಿ ಅಧಿಕ ಉತ್ಪಾದನೆ ತರುವ ಬಗ್ಗೆ ಯೋಚಿಸಿ. ಇದು ರೈತರಿಗೆ  ಅಗತ್ಯವಿದೆ.ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಿಕೊಂಡು ಯೋಜನೆ ರೂಪಿಸಿ. ಇಸ್ರೇಲ್ ಬಲ್ಲಿ ಕಡಿಮೆ ಮಳೆ ಆಗುತ್ತದೆ. ಆದರೂ ಅವರು ಹೆಚ್ವು ಉತ್ಪಾದನೆ ಮಾಡುತ್ತಾರೆ. ನಿಮ್ಮ ಜ್ಞಾನವನ್ನು ವೈಯಕ್ತಿಕ ಲಾಭಕ್ಕೆ ಬಳಸದೆ ಸಮಾಜದ ಒಳಿತಿಗೆ ಬಳಸಿ. ಆಗ ದೇಶ ಉನ್ನತ ಸ್ಥಾನ ತಲುಪಬಹುದು.‌ . ನಿಮ್ಮ ತಂದೆ, ತಾಯಿ, ಕುಟುಂಬ ನಿಮಗೆ ಸಹಕಾರ ನೀಡಿದ್ದರಿಂದ ನೀವು ಸ್ಥಾನಕ್ಕೆ ಬಂದಿದ್ದೀರಿ. ನಿಮಗೆ ಶಿಕ್ಷಣ ಹೇಳಿಕೊಟ್ಟ ಗುರುಗಳಿಗೂ ಅಭಾರಿಯಾಗಿರಿ‌.‌ ದೇಶ ಹಾಗೂ ಕೃಷಿ ಪ್ರಗತಿಗೆ ನಿಮ್ಮದೆ ಕೊಡುಗೆ ನೀಡಿ ಎಂದರು.

ಹವಾಮಾನದಲ್ಲಿನ ಬದಲಾವಣೆ ಬೇರೆಲ್ಲಾ ಕ್ಷೇತ್ರಗಳಿಗಿಂತಲು ಕೃಷಿ ಹಾಗೂ ಪರಿಸರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ | ಪ್ರೊ.ಎಲ್.ಎಸ್.ಶಶಿಧರ್

ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಪ್ರೊ.ಎಲ್.ಎಸ್.ಶಶಿಧರ್ ಘಟಿಕೋತ್ಸವದ ಮುಖ್ಯ ಭಾಷಣಕಾರರಾಗಿ ಮಾತನಾಡಿ, ನಮ್ಮ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ವಿಸ್ತರಣೆಯ ಮೇಲೆ ಹಾಗೂ ನಾಶವಾಗುತ್ತಿರವ ಆವಾಸಸ್ಥನಗಳನ್ನು ಪುನಶ್ಚೇತನಗೊಳಿಸಿ ಮುಂದುವರಿಯಬಲ್ಲ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವುದರ ಮೇಲೆ ನಮ್ಮ ಗಮನವನ್ನು ಕೇಂದ್ರಿಕರಿಸುವುದು ಅವಶ್ಯಕವಾಗಿದೆ.ಹವಾಮಾನದಲ್ಲಿನ ಬದಲಾವಣೆ ಬೇರೆಲ್ಲಾ ಕ್ಷೇತ್ರಗಳಿಗಿಂತಲು ಕೃಷಿ ಹಾಗೂ ಪರಿಸರದ ಮೇಲೆ ಹೆಚ್ಚು ಪರಿಣಾಮ ಮಾಡುತ್ತದೆ.  ಒಳ್ಳೆಯ ಹವಾಮಾನ,  ಮಣ್ಣಿನ ಪರಿಸ್ಥಿತಿ ಹಾಗೂ ಸನಿಹದಲ್ಲಿ ಅರಣ್ಯ ಪ್ರದೇಶ ಇರುವಿಕೆ ಇವುಗಳ ಮೇಲೆ ಕೃಷಿ ನಿರ್ಭರವಾಗಿದೆ ಎಂದರು. ಪರಿಸರ ವ್ಯವಸ್ಥೆ ಹಾಗೂ ಜೈವಿಕ ವೈವಿಧ್ಯತೆ ಇವುಗಳಿಂದ ಕೃಷಿ ಹಾಗೂ ಪಶು ಸಂಗೋಪನೆ ಇವೆರಡು ನೇರವಾಗಿ ಪ್ರಭಾವಿತವಾಗುತ್ತದೆ. ನಮ್ಮ ದೇಶ ತನ್ನ ಪ್ರಜೆಗಳೆಲ್ಲರೂ ಆಹಾರ ಮತ್ತು ಪೌಷ್ಟಿಕತೆಯನ್ನು ಒದಗಿಸುವಲ್ಲಿ ಆತ್ಮನಿರ್ಭರವಾಗಲು ಮತ್ತು ಮುಂದಿನ ದಶಕಗಳಲ್ಲಿ ಸಂಭವಿಸಬಹುದಾಗ ನೈಸರ್ಗಿಕ ಹಾಗೂ ಮಾನವ ನಿರ್ಮಿತ ದುರಂತಗಳ ಸಮಯದಲ್ಲಿಯೂ ಆಹಾರ ಸಂರಕ್ಷಣೆಯನ್ನು ನೀಡಲು ಸಫಲವಾಗಿದೆ ಎಂದು ಹೇಳಿದರು.

ನಾವಿನ್ನೂ ಅಭಿವೃದ್ಧಿಯ ಹೊಂದುತ್ತಿರುವ ಹಂತದಲ್ಲಿ ಇದ್ದೇವೆ.  ಭಾರತದ ಜನಸಂಖ್ಯೆಯ ದೊಡ್ಡ ಭಾಗ ಬಡತನದ  ರೇಖೆಯ ಕೆಳಗೆ ಇದೆ. ಉತ್ತಮ ಮತ್ತು ಪೌಷ್ಟಿಕ ಆಹಾರದ ಲಭ್ಯತೆಯಲ್ಲಿ ಅಸಮಾನತೆ ಈಗಲೂ ಬಹಳ ಇದೆ.  ನಮ್ಮ ಕೃಷಿ ಪದ್ದತಿಯಲ್ಲಿ ಅತಿಯಾದ ನೀರು ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ  ಹಾಗೂ ತ್ರೀವ ವ್ಯವಸಾಯ ಪದ್ದತಿಗಳಿಂದಾಗಿ ಕೃಷಿ ಉತ್ಪಾದಕತೆಯ ಮೇಲೆ ಅತೀವ ಒತ್ತಡವುಂಟಾಗಿದೆ.  ವ್ಯವಸಾಯ ಖರ್ಚು ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ ಹಾಗೂ ಅದರಿಂದ ಬರುವ  ಆದಾಯ ಕುಂಠಿತವಾಗುತ್ತಿದೆ ಎಂದರು.

ಈ ವಿಶ್ವವಿದ್ಯಾಲಯವು ತನ್ನ ಸಂಶೋಧನೆ ಹಾಗೂ  ಶಿಕ್ಷಣದ ಚಟುವಟಿಕೆಗಳಲ್ಲಿ ಇಂತಹ ಸವಾಲಾಗುವ ಸಮಸ್ಯೆಗಳ ಬಗ್ಗೆ ಗಮನವನ್ನು ಕೇಂದ್ರಿಕರಿಸಿದೆಯೆಂದು ತಿಳಿದು ನನಗೆ ಸಂತೋಷವಾಗಿದೆ.  ಮೊದಲನೆದಾಗಿ ಇದು ಕೃಷಿ,  ತೋಟಗಾರಿಕೆ ಹಾಗೂ ಅರಣ್ಯಶಾಸ್ತ್ರಗಳನ್ನೊಳಗೊಂಡ ಒಂದು ಸಮಗ್ರ ವಿಶ್ವವಿದ್ಯಾಲಯವಾಗಿದೆ.  ಸುಸ್ಥಿರ ಜೀವನಕ್ಕೆ ಈ ಮೂರು ವಿಜ್ಞಾನಗಳ ಕೊಡುಗೆ ಅವಶ್ಯಕವಾಗಿದೆ.  ಕೃಷಿ  ಅರಣ್ಯ  ಹಾಗೂ ಆಹಾರಧಾನ್ಯಗಳು,  ಹಣ್ಣು ತರಕಾರಿಗಳು ಸೇರಿದಂತೆ ಬೆಳೆಗಳ ಆವರ್ತನೆ ಇವುಗಳಿಂದ ಭೂಮಿಯ ಕ್ಷಮತೆಯನ್ನು ಉತ್ತಮಗೊಳಿಸುವುದರ ಜೊತೆಗೆ ರೈತರ ಆದಾಯವನ್ನು ಹೆಚ್ಚಿಸಬಹುದು.  ಈ ವಿಶ್ವವಿದ್ಯಾಲಯದವು ಕೃಷಿ ಅರಣ್ಯ, ಜೈವಿಕ ಗೊಬ್ಬರಗಳು,  ಜೈವಿಕ ನಿಯಂತ್ರಣ ಸೂತ್ರಗಳು,  ಜೈವಿಕ ಇಂಧನಗಳು, ಪರಾಗಸ್ಪರ್ಷಗಳು ಇತ್ಯಾದಿ ವಿಷಯಗಳಲ್ಲಿ ನವೀನ ಉಪಕ್ರಮಗಳನ್ನು ತೆಗೆದುಕೊಂಡಿದೆ.  ಪಶ್ಚಿಮಘಟ್ಟದಲ್ಲಿ ಜೀವಿಸುತ್ತಾ, ಅಲ್ಲಿನ ಪರಿಸರವನ್ನು ಸ್ವಾಭಾವಿಕವಾಗಿ ಹಾಗೂ ಸಾಂಪ್ರದಾಯಿಕವಾಗಿ ರಕ್ಷಿಸುತ್ತಿರುವ ರೈತ ಸಮುದಾಯಕ್ಕೆ ಈ ವಿಶ್ವವಿದ್ಯಾಲಯವು ಪ್ರಾಮುಖ್ಯತೆಯನ್ನು ಕೊಡುತ್ತಿದೆಯೆಂದು ನಾನು ಕೇಳಿದ್ದೇನೆ ಎಂದು ತಿಳಿಸಿದರು.

SUMMARY |‌  Governor Thaawar Chand Gehlot said, “Just as we cannot use without bones, a country without a farmer will not be useful.

KEYWORDS |  Thaawar Chand Gehlot,  Governor,  farmer,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಮಿನಿ ಲಾರಿ ಪಲ್ಟಿ 10ಮಂದಿ ಸಾವು
Next Article 28 MSC ವಿದ್ಯಾರ್ಥಿಗಳಿಗೆ ಚಿನ್ನದ ಪದಕ 
Leave a Comment

Leave a Reply Cancel reply

Your email address will not be published. Required fields are marked *

You Might Also Like

Access Malenadu Today Newspaper PDF online,Get the latest Shivamogga news, express your views, and submit articles. Your trusted digital media for Malenadu,ಮಲೆನಾಡು ಟುಡೆ, ಶಿವಮೊಗ್ಗ ಸುದ್ದಿ, ಡಿಜಿಟಲ್ ಪತ್ರಿಕೆ, ಕನ್ನಡ ಸುದ್ದಿ, PDF ಸುದ್ದಿಪತ್ರಿಕೆ, ಮಲೆನಾಡು, ಸ್ಥಳೀಯ ಸುದ್ದಿ, ನಿಮ್ಮ ಅಭಿಪ್ರಾಯ, ಲೇಖನ ಪ್ರಕಟಣೆ, ಸುದ್ದಿ ಸಲ್ಲಿಕೆ,Malenadu Today, Shivamogga News, Digital Newspaper, Kannada News, PDF Newspaper, Malenadu, Local News, Express Views, Submit Articles, News Submission,#MalenaduToday #ShivamoggaNews #DigitalNewspaper #KannadaNews #PDFNews #LocalMedia #YourVoice #SubmitYourStory
JP STORYSHIMOGA NEWS LIVESHIVAMOGGA NEWS TODAYSTATE NEWS

Malenadu Today Newspaper PDF Online | 14-07-205

By Malenadu Today
Shikaripura accident
SHIVAMOGGA NEWS TODAY

bhadra dam ಜೂನ್​ 28 : ಭದ್ರಾ ಡ್ಯಾಂ ನಿಂದ ನದಿಗೆ ನೀರು | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು

By Prathapa thirthahalli
SHIVAMOGGA NEWS TODAY

ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿದ್ದ ಏಕೈಕ ಗಂಡು ಹುಲಿ ಸಾವು

By 131
Online frauds
SHIVAMOGGA NEWS TODAY

Chatpat news today : ನಿಷೇಧಿತ PFI ಜಿಲ್ಲಾಧ್ಯಕ್ಷ ಶಾಹೀದ್ ಖಾನ್‌ಗೆ ಶಿವಮೊಗ್ಗಕ್ಕೆ, ಮೆಗ್ಗಾನ್‌ನಲ್ಲಿ ನೀರಿನ ಕೊರತೆ ಸೇರಿದಂತೆ ಟಾಪ್​ 03 ಚಟ್​ಪಟ್​ ನ್ಯೂಸ್​

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up