krishna byre gowda statement on bagar hukum ಶಿವಮೊಗ್ಗ, malenadu today news : August 20 2025 : ಬಗರ್ ಹುಕುಂ ಅರ್ಜಿಗಳ ವಿಲೇವಾರಿಗಾಗಿ ಬಗರ್ ಹುಕುಂ ತಂತ್ರಾಂಶ ಜಾರಿ-ಕಂದಾಯ ಸಚಿವ ಕೃಷ್ಣ ಬೈರೇಗೌಡ
ಅನಧಿಕೃತ ಸಾಗುಳಿ ಸಕ್ರಮೀಕರಣ ಕೋರಿ ಸಲ್ಲಿಕೆಯಾಗಿರುವ ಹಾಗೂ ಸಮಿತಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ನಿರ್ವಹಿಸಲು ಬಗರ್ ಹುಕುಂ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು
ಇದನ್ನು ಸಹ ಓದಿ : 15 ದಿನ ಶಿವಮೊಗ್ಗ ಜಿಲ್ಲೆಯಲ್ಲಿ ಪೇಪರ್ ಬ್ಲಾಷ್ಟಿಂಗ್ ಹಾಗೂ ಸಿಡಿಮದ್ದು ನಿಷೇಧ https://malenadutoday.com/ganesh-chaturthi/
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ನಂಜೇಗೌಡ ಕೆ.ವೈ ಇವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಬಗರ್ ಹುಕುಂ ತಂತ್ರಾಂಶ ಜಾರಿಯಿಂದಾಗಿ ಅರ್ಜಿಗಳನ್ನು ಶೀಘ್ರವಾಗಿ ಹಾಗೂ ಪಾರದರ್ಶಕವಾಗಿ ಪರಿಶೀಲಿಸಿ ಸಮಿತಿಯ ಮುಂದೆ ಮಂಡಿಸಲು ಯಾವುದೇ ಲೋಪವಿಲ್ಲದಂತೆ ಅರ್ಹ ಸಾಗುವಳಿದಾರರಿಗೆ ಸಾಗುವಳಿ ಚೀಡಿ ನೀಡುವುದು ಖಾತೆ ದಾಖಲೀಕರಿಸುವುದು, ಪೋಡಿ ಪ್ರಕ್ರಿಯೆಗೊಳಪಡಿಸಿ ನೋಂದಣಿ ಕಚೇರಿಯಲ್ಲಿ ಫಲಾನುಭವಿಗಳ ಹೆಸರಿಗೆ ನೋಂದಣಿ ಮಾಡಿಸಿ ಮಂಜೂರಿದಾರರಿಗೆ ಪಹಣಿ ವಿತರಣೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ನಮೂನೆ 57ರಡಿ ಮಂಜೂರು ಮಾಡಲು ಒಟ್ಟು 1852 ಅರ್ಜಿಗಳುಬಾಕಿ ಇರುತ್ತವೆ. ಬಾಕಿ ಉಳಿದಿರುವ ಅರ್ಜಿಗಳನ್ನು ಮುಂದಿನ ಆರು ತಿಂಗಳ ಕಾಲಮಿತಿಯೊಳಗಾಗಿ ನಿಯಮಾನುಸಾರ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..