ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ

prathapa thirthahalli
Prathapa thirthahalli - content producer

ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ

ಶಿವಮೊಗ್ಗ : ನಗರದ ಉಪವಿಭಾಗ -1 ರ ಘಟಕ-1 ರ ವ್ಯಾಪ್ತಿಯಲ್ಲಿ ಆ.07 ರಂದು ಎಫ್-9 ಫೀಡರ್ ಜ್ಯೋತಿನಗರ ಮಾರ್ಗದ ನಿರ್ವಹಣಾ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಎಫ್-9 ಮತ್ತು ಎಫ್-1 ಫೀಡರ್ ನಲ್ಲಿ ಆ.07 ಬೆಳಿಗ್ಗೆ 9.00 ರಿಂದ ಸಂಜೆ 5.00 ವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

Power cut :  ಎಲ್ಲೆಲ್ಲಿ ವಿದ್ಯುತ್​ ಇರಲ್ಲ

ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಟೋಯೋಟಾ ಶೋ ರೂಂ ಹಿಂಭಾಗ, ಊರಗಡೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಘಟಕ-1 ರ ವ್ಯಾಪ್ತಿಯ ನಾಗಪ್ಪ ಕೇರಿ, ಗಾಂಧಿ ಬಜಾರ್​, ಸಾವರ್ಕರ್ ನಗರ, ಫಿಶ್ ಮಾರ್ಕೆಟ್, ಅಶೋಕ ರಸ್ತೆ, ತುಳಜಾ ಭವಾನಿ ರಸ್ತೆ, ತಿರುಪಳಯ್ಯನ ಕೇರಿ, ಎಲೆರೆವಣ್ಣ ಕೇರಿ, ಅನವೇರಪ್ಪ ಕೇರಿ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಎಂದು ಮವಿಸಕಂ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Share This Article