jp story today : ಶರಾವತಿ ಮುಳುಗಡೆ ಸಂತ್ರಸ್ತರ ಬಹುದಿನದ ಕನಸು ಈಗ ನನಸಾಗುವ ಕಾಲ ಸನ್ನಿಹಿತವಾಗಿದೆ. ಕಳಸವಳ್ಳಿ-ಅಂಬಾರಗೋಡು ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಒಂದು ಪ್ರವಾಸಿ ತಾಣವಾಗಿ ಕಾಣುವಂತಾಗಿದೆ. ದಶಕಗಳ ಹೋರಾಟ, ಅದಕ್ಕೆ ಪೂರಕ ಸ್ಪಂದನೆ ನೀಡಿದ ಸರ್ಕಾರದ ವ್ಯವಸ್ಥೆ, ಯೋಜನೆ ಜಾರಿಗೊಳಿಸಲು ರಾಜಕಾರಣಿಗಳು ತೋರಿದ ಔದಾರ್ಯ ಎಲ್ಲವೂ ಚಿರಸ್ಮರಣೀಯ. ಆದರೆ ಸೇತುವೆಗೆ “ಸಿಗಂದೂರು ಚೌಡೇಶ್ವರಿ ಸೇತುವೆ” ಎಂದು ನಾಮಕರಣ ಮಾಡಿರುವುದಾಗಿ ಸಂಸದ ಬಿ.ವೈ. ರಾಘವೇಂದ್ರ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದ ವಿಚಾರದಲ್ಲಿ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ, ದೇವಸ್ಥಾನದ ವಿಚಾರದಲ್ಲಿ ತಳೆದ ನಿಲುವಿಗೆ ಈಡಿಗ ಸಮುದಾಯ ಸಿಡಿದೆದ್ದು ನಿಂತಿತ್ತು. ಈಗ ಆ ಸಮುದಾಯದ ಜನರ ವಿಶ್ವಾಸ ಗಳಿಸಲು ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ನಾಮಕರಣ ಮಾಡಲಾಗುತ್ತಿದೆ ಎಂಬ ಚರ್ಚೆಗಳು ಬಿರುಸುಗೊಂಡಿದೆ.
ಹೌದು, 2020ರಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಹಣಕಾಸಿನ ವಿಚಾರದಲ್ಲಿ ಅರ್ಚಕರು ಹಾಗೂ ಧರ್ಮದರ್ಶಿಗಳ ನಡುವೆ ನಡೆದ ವಿವಾದ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ, ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕು ಎಂದೂ ಒಂದು ಗುಂಪಿನ ಕೂಗು ಎದ್ದಿತ್ತು.

jp story today : ಜಿಲ್ಲಾಡಳಿತದ ಮೇಲುಸ್ತುವಾರಿ ಸಮಿತಿಗೆ ಈಡಿಗ ಸಮುದಾಯ ವಿರೋಧ
ಸಿಗಂದೂರು ಶ್ರೀ ಕ್ಷೇತ್ರ ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೆಂಬ ಒಂದು ಗುಂಪಿನ ಕೂಗಿಗೆ ವಿರುದ್ಧವಾಗಿ ಆಗ ಈಡಿಗ ಸಮುದಾಯ ಬಹಿರಂಗವಾಗಿ ತೊಡೆತಟ್ಟಿ ನಿಂತಿತ್ತು. ಯಾವುದೇ ಕಾರಣಕ್ಕೂ ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಬಿಡುವುದಿಲ್ಲ ಎಂದು ಜಿಲ್ಲಾ ಈಡಿಗ ಸಮುದಾಯದ ಮುಖಂಡರು ಗಟ್ಟಿ ದನಿ ಎತ್ತಿದ್ದರು. ದೇವಸ್ಥಾನಕ್ಕೆ ಜಿಲ್ಲಾಡಳಿತ ಮೇಲುಸ್ತುವಾರಿ ಸಮಿತಿ ರಚಿಸಿರುವುದಕ್ಕೆ ಜಿಲ್ಲಾ ಆರ್ಯ ಈಡಿಗ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಅಂದು ನಡೆದ ಸಭೆಯಲ್ಲಿ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಸಮಾಜದ ಹಲವು ಗಣ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ್ದ ಕಾಗೋಡು ತಿಮ್ಮಪ್ಪನವರು, “ದೇವಸ್ಥಾನದ ವಿಷಯದಲ್ಲಿ ಸಮಿತಿ ರಚನೆ ಮಾಡಿರುವುದು ಸರಿಯಲ್ಲ. ಸಿಗಂದೂರು ವಿಶೇಷ ಕ್ಷೇತ್ರ ಉಳಿಸಿಕೊಳ್ಳಲು ಸರ್ಕಾರ ಸಹಕಾರ ಮಾಡಬೇಕು. ಇಂದೇ ಶಿಕಾರಿಪುರದಲ್ಲಿ ಸಂಸದ ರಾಘವೇಂದ್ರ ಅವರ ಬಳಿ ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಸಿಗಂದೂರು ರಾಮಪ್ಪ ಅವರ ಕುಟುಂಬದ ದೇವರು. ಅವರ ಧಾರ್ಮಿಕ ಶ್ರಮದಿಂದ ಕ್ಷೇತ್ರದ ಮಹಿಮೆ ರಾಷ್ಟ್ರಕ್ಕೇ ಗೊತ್ತಾಗುವಂತಾಗಿದೆ. ಎಲ್ಲರೂ ಸೇರಿ ರಾಮಪ್ಪ ಹಾಗೂ ಈಡಿಗ ಸಮುದಾಯದ ಬಳಿ ದೇವಸ್ಥಾನವನ್ನು ಉಳಿಸಿಕೊಳ್ಳಬೇಕು. ಎಲ್ಲ ಹೋರಾಟಕ್ಕೆ ಬೆಂಬಲ ನೀಡುತ್ತೇನೆ” ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದರು.
jp story today : ಗುಡುಗಿದ್ದ ಬೇಳೂರು
jp story today ಅಂದಿನ ಸಭೆಯಲ್ಲಿ ಮಾತನಾಡಿದ್ದ ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ ಡಿಸಿ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದರು. “ಈಡಿಗ ಸಂಘಟನೆ ಬಗ್ಗೆ ಅವರು ಹಗುರವಾಗಿ ಮಾತನಾಡಿದ್ದಾರೆ. ಈಡಿಗ ಸಮಾಜವನ್ನು ಕೇವಲವಾಗಿ ನೋಡಿದರೆ, ನಾವು ಸಹಿಸಲ್ಲ. ನಮ್ಮ ಸಮಾಜದವರು ರಾಜ್ಯದಲ್ಲಿ ಅರವತ್ತು ಲಕ್ಷ ಜನ ಇದ್ದೇವೆ” ಎಂದು ಎಚ್ಚರಿಸಿದ್ದರು. “ಸಿಗಂದೂರು ಕ್ಷೇತ್ರ ದೇವಿಯ ಶಕ್ತಿಯಿಂದ ಬೆಳೆದಿದೆ. ಟ್ರಸ್ಟ್‌ನ ಆಡಳಿತ ರದ್ದು ಮಾಡಬಾರದಿತ್ತು. ಸಾಗರ ಶಾಸಕರು ಎಲ್ಲವನ್ನೂ ಬಗೆಹರಿಸುವ ಕೆಲಸ ಮಾಡಬಹುದಿತ್ತು” ಎಂದು ಹರತಾಳು ಹಾಲಪ್ಪರನ್ನು ಬೇಳೂರು ವ್ಯಂಗ್ಯವಾಡಿದ್ದರು. “ಈ ಹಿಂದೆ ರಾಮಚಂದ್ರಪುರ ಮಠ ಪರ ಹೋರಾಟದಲ್ಲಿ ಈಡಿಗ ಸಮಾಜ ಹೋರಾಡಿತ್ತು. ಆಗ ನಾವು ಜಾತಿ ನೋಡಿರಲಿಲ್ಲ. ಸಿಗಂದೂರಿನಲ್ಲಿ ರಾಮಪ್ಪ ಮತ್ತು ಶೇಷಗಿರಿ ಭಟ್ಟರು ಒಂದಾಗಿ ಹೋಗಬೇಕು. ಈ ಬಗ್ಗೆ ಮಾತನಾಡುತ್ತೇನೆ” ಎಂದು ಬೇಳೂರು ಹೇಳಿದ್ದರು.
“ಸಿಗಂದೂರು ಕ್ಷೇತ್ರದ ಉಳಿವಿಗೆ ಎಲ್ಲ ಸಮಾಜದವರು ಬರುತ್ತಾರೆ. ಬ್ರಾಹ್ಮಣರು, ದಲಿತರೂ ನಮಗೆ ಬೆಂಬಲ ಕೊಡುತ್ತಾರೆ. ಈ ಬಗ್ಗೆ ಒಪ್ಪಿಗೆ ಇದೆ. ಪಕ್ಷದ ಚುನಾವಣೆಗೆ ಈಗ ಬೇಡ. ಗೋಕರ್ಣ, ಧರ್ಮಸ್ಥಳ, ಉಡುಪಿ ಎಲ್ಲ ಕಡೆ ಗಲಾಟೆ ಆಗಿದೆ, ಅಲ್ಲಿ ಸಮಿತಿ ಮಾಡಿಲ್ಲ. ಯಡಿಯೂರಪ್ಪ, ರಾಘವೇಂದ್ರ ಅರ್ಥಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಈಡಿಗರು-ಬ್ರಾಹ್ಮಣರು ಅನ್ಯೋನ್ಯವಾಗಿದ್ದೇವೆ. ಸಿಗಂದೂರು ದೇವಿ ಮುನಿಸಿಕೊಂಡರೆ ಯಡಿಯೂರಪ್ಪ ಮತ್ತವರ ಮಗ ರಾಜಕೀಯವಾಗಿ ನಷ್ಟಕ್ಕೊಳಗಾಗುತ್ತಾರೆ” ಎಂದು ಬೇಳೂರು ಎಚ್ಚರಿಸಿದ್ದರು. ಅಂದಿನ ಸಭೆಯಲ್ಲಿ ಎಲ್ಲಾ ಮುಖಂಡರುಗಳು ತಮ್ಮದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಲ್ಲರೂ ಮೇಲುಸ್ತುವಾರಿ ಸಮಿತಿ ರಚನೆಗೆ ಒಕ್ಕೊರಲಾಗಿ ವಿರೋಧ ವ್ಯಕ್ತಪಡಿಸಿದ್ದರು.
ಸಿಗಂದೂರು ಕ್ಷೇತ್ರದಲ್ಲಿ ಈಗ ಎಲ್ಲಾ ವಿವಾದಗಳಿಗೂ ತೆರೆಬಿದ್ದಿದೆ. ಮನಸ್ಸುಗಳು ಹಗುರವಾಗಿದೆ. ಬಿಜೆಪಿ ಸರ್ಕಾರದಲ್ಲಾದ ಆ ಒಂದು ಮಹಾ ಪ್ರಮಾದದ ತಪ್ಪನ್ನು ತಿದ್ದಿಕೊಳ್ಳಲು, ಹಾಗೂ ಈಡಿಗ ಸಮುದಾಯದ ಮನಗೆಲ್ಲಲು ಸಂಸದರು ಈ ನಿರ್ಧಾರಕ್ಕೆ ಬಂದರೇ? ಅವರೇ ಖುದ್ದಾಗಿ ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಘೋಷಿಸಿದ್ದಾರೆ. ಇದು ಸ್ವಾಗತಾರ್ಹವಾಗಿದೆ. ಬಹುತೇಕರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ತಮ್ಮದೇ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೇತುವೆಗೆ ಶರಾವತಿ ಸೇತುವೆ ಎಂದು ನಾಮಕರಣ ಮಾಡಿ, ಸೇತುವೆಗೆ ಯಡಿಯೂರಪ್ಪ ಶ್ರಮಿಸಿದ್ದಾರೆ, ಅವರ ಹೆಸರನ್ನು ನಾಮಕರಣ ಮಾಡಿ ಎಂಬ ಕೂಗು ಕೇಳಿಬರುತ್ತಿದೆ.
jp story today ಅಂಬಾರಗೋಡು-ಕಳಸವಳ್ಳಿ ನಡುವೆ ನಿರ್ಮಾಣಗೊಂಡಿರುವ ಸೇತುವೆ ನಾಮಕರಣ ವಿವಾದ ಈಗ ಹೈಕೋರ್ಟ್ ಮೆಟ್ಟಿಲೇರಿದೆ. ಶಿವಮೊಗ್ಗದ ನಿದಿಗೆಯ ನಿವಾಸಿ ಕೆ. ಹರನಾಥರಾವ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ‘ಸೇತುವೆ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಕಾರಣ. ಅವರ ಹೆಸರನ್ನು ಸೇತುವೆಗೆ ಅಂತಿಮಗೊಳಿಸಬೇಕು. ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಬೇಕು’ ಎಂದು ಕೋರಿದ್ದಾರೆ. ರಿಟ್ ಅರ್ಜಿಯ ವಿಚಾರಣೆ ಜುಲೈ 10ರಂದು ಹೈಕೋರ್ಟ್‌ನಲ್ಲಿ ನಡೆಯಲಿದೆ.
ಈ ಹಿಂದೆ “ಶಿವಮೊಗ್ಗ ವಿಮಾನ ನಿಲ್ದಾಣ”ಕ್ಕೆ ಮಾಜಿ ಸಿಎಂ ಎಸ್. ಬಂಗಾರಪ್ಪ ಹೆಸರಿಡಬೇಕು ಎಂದು ಈಡಿಗ ಸಮುದಾಯ ಒತ್ತಾಯಿಸಿತ್ತು. ಮತ್ತೊಂದೆಡೆ ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪನವರ ಹೆಸರಿಡಬೇಕು ಎಂದು ಅಭಿಮಾನಿ ಬಳಗ ಒತ್ತಾಯಿಸಿತ್ತು. ಶಾಂತವೇರಿ ಗೋಪಾಲಗೌಡರ ಹೆಸರಿಡುವಂತೆ ಒಕ್ಕಲಿಗ ಸಮುದಾಯ ಒತ್ತಾಯಿಸಿತ್ತು. ಇನ್ನು ಶಾಂತವೇರಿ ಗೋಪಾಲಗೌಡ ಅಧ್ಯಯನ ಸಂಸ್ಥೆಯು ಶಿವಪ್ಪ ನಾಯಕನ ಹೆಸರಿಡುವಂತೆ ಮನವಿ ಮಾಡಿತ್ತು.
jp story today ನಿಜಕ್ಕೂ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಿಸುವುದು ಬಿ.ಎಸ್. ಯಡಿಯೂರಪ್ಪನವರ ಕನಸಿನ ಕೂಸಾಗಿತ್ತು. ಅದು ಸಾಕಾರಗೊಂಡಾಗ ಬಹುತೇಕರು ಯಡಿಯೂರಪ್ಪನವರ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಯಡಿಯೂರಪ್ಪನವರ ಜಾಣ ನಡೆ, ಸಮಯ ಪ್ರಜ್ಞೆ ರಾಜಕೀಯ ದೂರದೃಷ್ಟಿಯಿಂದ ಅವರೇ ಅಂದು ಶಿವಮೊಗ್ಗದಲ್ಲಿ 2023ರ ಫೆಬ್ರವರಿ 8ರಂದು ಶಿವಮೊಗ್ಗದ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ, ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವುದಾಗಿ ಘೋಷಿಸಿದರು. 2023ರ ಫೆಬ್ರವರಿ 27ಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ. ಅವರು ಬರುವುದು ನಿಶ್ಚಿತವಾಗಿದ್ದು, ಅವರು ಒಪ್ಪಿಕೊಂಡಿದ್ದಾರೆ. ಆ ದಿನ ಶ್ರೇಷ್ಠ ಕವಿ ಸಂತ, ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಅವರ ಹೆಸರನ್ನು ಏರ್‌ಪೋರ್ಟ್‌ಗೆ ನಾಮಕರಣ ಮಾಡಲಾಗುವುದೆಂದು ತಿಳಿಸಿದ್ದರು. ನಾಳಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಪ್ರಧಾನಿ ಮೋದಿಯವರಿಂದಲೇ ಈ ಹೆಸರು ಘೋಷಿಸಲಾಗುವುದೆಂದು ಹೇಳಿದ್ದರು.
jp story today ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ ಸಹ ಜನರು ಯಡಿಯೂರಪ್ಪ ಎಂದು ಅಭಿಮಾನದಿಂದ ಕಾಣುತ್ತಿದ್ದಾರೆ. ಇದು ನನಗೆ ಒಂದು ಸವಾಲು. ನನಗೆ ಅಧಿಕಾರ ಹಾಗೂ ಸ್ಥಾನಮಾನ ಇಲ್ಲದಿದ್ದರೂ ಸಹ ಪಕ್ಷವನ್ನು ಅಧಿಕಾರಕ್ಕೆ ತರುವ ಹಂಬಲ ನನಗಿದೆ. ಜನರ ಆಶೀರ್ವಾದ ನನ್ನ ಮೇಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ. 140ಕ್ಕೂ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತೆ” ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಪರಿಸ್ಥಿತಿ ಹೀಗಿರುವಾಗ ಯಡಿಯೂರಪ್ಪನವರು ಸೇತುವೆ ನಾಮಕರಣಕ್ಕೂ ತಮ್ಮ ಹೆಸರಿಡಲು ಒಪ್ಪಿಗೆ ಸೂಚಿಸುತ್ತಾರೆಯೇ ಎಂಬುದು ಯಕ್ಷಪ್ರಶ್ನೆ.