Shivamogga Robbery ಶಿವಮೊಗ್ಗ : ಶಿವಮೊಗ್ಗದ ಕೆ.ಆರ್. ಪುರಂ ಬಳಿ ಆಟೋ ಚಾಲಕರೊಬ್ಬರನ್ನು ಅಡ್ಡಗಟ್ಟಿ, ಲಕ್ಷಾಂತರ ರೂಪಾಯಿ ನಗದು ದರೋಡೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Shivamogga Robbery ಹೇಗಾಯ್ತು ಘಟನೆ
ಶಿವಮೊಗ್ಗದ ವಿವಿದ ಆಟೋ ಸ್ಟ್ಯಾಂಡ್‌ನ ಚಾಲಕರು ಪ್ರತ್ಯೇಕವಾಗಿ ಮೂರು ಫಂಡ್‌ಗಳನ್ನು ಮಾಡಿಕೊಂಡಿದ್ದರು. ಪ್ರತಿ ಶನಿವಾರ ಈ ಫಂಡ್‌ಗಳಿಗೆ ಹಣ ಹಾಕಿ, ಅಗತ್ಯವಿರುವ ಆಟೋ ಚಾಲಕರಿಗೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದರಂತೆ, ಜುಲೈ 5ರಂದು ಅಲಬಕ್ಷ್ ಎಂಬುವರು ಮೂರು ಫಂಡ್‌ಗಳ ಚೀಟಿಗಳನ್ನು ಮುಗಿಸಿಕೊಂಡು, ಫಂಡ್‌ನಲ್ಲಿ ಉಳಿದ 2 ಲಕ್ಷ ರೂಪಾಯಿ ಹಣ ಮತ್ತು ಫಂಡ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ಬ್ಯಾಗ್‌ನಲ್ಲಿಟ್ಟುಕೊಂಡು ತಮ್ಮ ಸಹೋದರನೊಂದಿಗೆ ಆಟೋದಲ್ಲಿ ಹೊರಟಿದ್ದರು.
ಕೆ.ಆರ್. ಪುರಂ ಬಡಾವಣೆ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಏಕಾಏಕಿ ಎರಡು ಬೈಕ್‌ಗಳಲ್ಲಿ ಬಂದ ಐವರು ಕಳ್ಳರು ಆಟೋವನ್ನು ಅಡ್ಡಗಟ್ಟಿದ್ದಾರೆ. ನಂತರ, ಅಲಬಕ್ಷ್ ಅವರ ಬ್ಯಾಗ್‌ನಲ್ಲಿದ್ದ ಹಣವನ್ನು ಕಸಿದುಕೊಂಡು, ಅವರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
