kumsi murder case solved ಕುಂಸಿ ಕೊಲೆ ಪ್ರಕರಣ ಭೇದಿಸಿದ ಶಿವಮೊಗ್ಗ ಪೊಲೀಸರು: ಇಬ್ಬರು ಆರೋಪಿಗಳ ಬಂಧನ
Shivamogga news today ಶಿವಮೊಗ್ಗ, ಜುಲೈ 2, 2025: ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಸಿ ಗ್ರಾಮದಲ್ಲಿ ಕಳೆದ ಜೂನ್ 29, 2025 ರಂದು ನಡೆದಿದ್ದ ಕೊಲೆ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪೊಲೀಸರು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಸಂಬಂಧ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

kumsi murder case solved
ಬಂಧಿತರು
: ಎಂ. ಹರೀಶ ( 23 ವರ್ಷ, ಗಾರೆ ಕೆಲಸ, ವಾಸ ಎ.ಕೆ ಕಾಲೋನಿ, ಕುಂಸಿ ಗ್ರಾಮ, ಶಿವಮೊಗ್ಗ ತಾಲ್ಲೂಕು)

: ಆಕಾಶ್ ( 21 ವರ್ಷ, ಗಾರೆ ಕೆಲಸ, ವಾಸ ಎ.ಕೆ ಕಾಲೋನಿ, ಕುಂಸಿ ಗ್ರಾಮ, ಶಿವಮೊಗ್ಗ ತಾಲ್ಲೂಕು)
ನಡೆದಿದ್ದೇನು?
ಕುಂಸಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಯುವಕನೊಬ್ಬನನ್ನು ಕೊಲೆ ಮಾಡಲಾಗಿತ್ತು. ಈ ಸಂಬಂದ ವರದಿ ಇಲ್ಲಿದೆ.. Kumsi PS limits incident june 30 / ಮಚ್ಚಿನಿಂದ ಹೊಡೆದು ಯುವಕನ ಕೊಲೆ/ ನಡೆದಿದ್ದೇನು?
ಇನ್ನೂ ಪ್ರಕರಣದ ಕುರಿತಾಗಿ ಕುಂಸಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 103(1), 3(5) ಬಿ.ಎನ್.ಎಸ್. ಅಡಿ ಕೇಸ್ ದಾಖಲಾಗಿತ್ತು. ಕೊಲೆಯಾದ ವಾಸು(32) ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡ ಕುಂಸಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಎಂ.ಎಸ್, ಪಿಎಸ್‌ಐ ಶಾಂತರಾಜ್, ಮತ್ತು ಕುಂಸಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸಿಹೆಚ್‌ಸಿ 400 ಪ್ರಕಾಶ್, ಸಿಹೆಚ್‌ಸಿ 235 ರಾಘು ಶೆಟ್ಟಿ. ಜೀಪ್ ಚಾಲಕ ಎ.ಹೆಚ್.ಸಿ 20 ಶಿವಪ್ಪ, ಸಿಪಿಸಿ 1503 ಶಶಿಧರ, ಸಿಪಿಸಿ 1430 ಮಂಜುನಾಥ, ಸಿಪಿಸಿ 1454 ರಘು.ಬಿ., ಸಿಪಿಸಿ 1417 ನಿತೀನ್, ಸಿಪಿಸಿ 1047 ಆದರ್ಶ, ಸಿಪಿಸಿ 1481 ವಿನಾಯಕ ಬಿ.ಟಿ., ಸಿಪಿಸಿ 1422 ಶಶಿಕುಮಾರ್, ಸಿಪಿಸಿ 1875 ಬುರಾನ್ ರವರ ತಂಡ ಇದೀಗ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ.
ಕೃತ್ಯದ ಬಳಿಕ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ಜಪ್ಪಿ ಮಾಡಿ ಇಬ್ಬರನ್ನು ಸಹ ಕೋರ್ಟ್ಗೆ ಹಾಜರು ಪಡಿಸಿದ್ದಾರೆ.