SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 28, 2025
ಶಿವಮೊಗ್ಗ | ಸವರ್‌ಲೈನ್ ರಸ್ತೆಯ ಐಸಿರಿ ಹೋಟೆಲ್ ಹತ್ತಿರದ ಫುಟ್‌ಪಾತ್ ಮೇಲೆ ಬಿದ್ದಿದ್ದ ಸುಮಾರು 50-55 ವರ್ಷ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ಪರಿಚಯ ತಿಳಿಯದಿದ್ದು, ಈ ಸಂಬಂದ ಪೊಲೀಸ್ ಇಲಾಖೆ ಗುರುತು ಪತ್ತೆಗಾಗಿ ಪ್ರಕಟಣೆ ನೀಡಿದೆ.
ಕಳೆದ ಜನವರಿ 26 ರಂದು ಪ್ರಜ್ಞೆಯಿಲ್ಲದೆ ಬಿದ್ದಿದ್ದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಈ ವ್ಯಕ್ತಿಯ ಹೆಸರು, ವಿಳಾಸ, ವಾರಸ್ಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ, ಮೃತವ್ಯಕ್ತಿಯ ಬಗ್ಗೆ ಸುಳಿವು ನೀಡುವಂತೆ ದೊಡ್ಡಪೇಟೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಮೃತ ವ್ಯಕ್ತಿಯು 5.6 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಬಲ ಮಣಿಕಟ್ಟಿನ ಮೇಲ್ಭಾಗದಲ್ಲಿ ರಾಗಿ ಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಎಡ ಮುಂಗೈ ಹೊರಭಾಗದಲ್ಲಿ ಸುಮಾರು ಅರ್ಧ ಇಂಚು ಉದ್ದಗಲದ ಅರ್ಧ ವಾಸಿಯಾಗಿರುವ ರಕ್ತ ಗಾಯದ ಗುರುತು ಇರುತ್ತದೆ. ಬಲ ಮುಂಗೈನ ಹೊರಭಾಗದಲ್ಲಿ 3 ರಿಂದ 4 ಇಂಚು ಉದ್ದದ ಹಳೇ ಗಾಯದ ಗುರುತು ಇರುತ್ತದೆ ಹಾಗೂ ಎಡಗಾಲಿನ ಮಂಡಿ ಚಿಪ್ಪಿಗೆ ಹಳೆ ಗಾಯದ ಗುರುತು ಇರುತ್ತದೆ. ಮೈಮೇಲೆ ಬಿಳಿ,ಕಪ್ಪು ಬಣ್ಣದ ಡಿಸೈನ್ ಇರುವ ಪ್ರಿಂಟೆಡ್ ತುಂಬು ತೋಳಿನ ಶರ್ಟ್, ಕಂದು ಬಣ್ಣದ ಚಡ್ಡಿ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಯ ವಾರಸ್ಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.:08182-261414, 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
SUMMARY | There is no information about the name, address, heirs of this person. The Doddapet police have issued an information asking them to inform them immediately if they are found.
KEYWORDS | information, Doddapet police,