SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 24, 2025
ಶಿವಮೊಗ್ಗ| ಬಸವಕೇಂದ್ರ ಶಿವಮೊಗ್ಗ ಇವರ ಸಹಯೋಗದಲ್ಲಿ ಶಿವಮೊಗ್ಗ ತಾಲ್ಲೂಕು 3 ನೇ ಶರಣ ಸಾಹಿತ್ಯ ಸಮ್ಮೇಳನ ಹಾಗು 100ನೆಯ ವಚನ ಮಂಟಪ ವಿಶೇಷ ಕಾರ್ಯಕ್ರಮ ಜನವರಿ 25 ಹಾಗು 26 ರಂದು ನಡೆಯಲಿದೆ. ಈ ಕುರಿತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಶಿವಮೊಗ್ಗದ ಅಧ್ಯಕ್ಷರಾದ ಹೆಚ್.ಎನ್ ಮಹಾರುದ್ರ ತಿಳಿಸಿದರು.
ಇಂದು ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು 25 ರಂದು ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪೂಜ್ಯ ಶ್ರೀ ಸಿದ್ದಬಸವ ಕಬೀರ ಮಹಾಸ್ವಾಮಿಗಳು ಮಾಡಲಿದ್ದು, ಶ್ರೀ ಮ.ನಿ.ಪ್ರ ಡಾ. ಬಸವ ಮರುಳಸಿದ್ದ ಸ್ವಾಮಿಗಳು ಕಾರ್ಯಕ್ರಮದ ಮಹಾಸಾನಿಧ್ಯವನ್ನು ವಹಿಸಲಿದ್ದಾರೆ. ಹಾಗೆಯೇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಆರ್ ಸ್ವಾಮಿ ವಹಿಸಲಿದ್ದಾರೆ ಎಂದರು.ಹಾಗೆಯೇ ಆ ದಿನ ಬೆಳಿಗ್ಗೆ ಕದಳಿ ಮಹಿಳಾ ವೇದಿಕೆ ಶಿವಮೊಗ್ಗ ಇವರರಿಂದ ವಚನಾ ಕಾರ್ಯಕ್ರಮ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
26 ರಂದು ನಡೆಯುವ ಸಮ್ಮೇಳನದ ಉದ್ಘಾಟನೆಯನ್ನು ಗಮಕ ಕಲಾಶ್ರೀ ವಿದ್ವಾನ್ ಎಂಜಿ ಸಿದ್ದರಾಮಯ್ಯನವರು ಮಾಡಲಿದ್ದಾರೆ. ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾ ಸ್ವಾಮಿಗಳು ಆನಂದಪುರ ಬೆಕ್ಕಿನ ಕಲ್ಮಠ ಇವರು ಸಮ್ಮೇಳ್ಳನದ ದಿವ್ಯಸಾನಿಧ್ಯವನ್ನು ವಹಿಸಲಿದ್ದಾರೆ. ಹಾಗೆಯೇ ಸಮ್ಮೇಳನದ ಅಧ್ಯಕ್ಷತೆಯನ್ನು ಶ್ರೀ ಎಸ್ ರುದ್ರೇಗೌಡರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಎಸ್ ಎನ್ ಚೆನ್ನಬಸಪ್ಪ ಹಾಗೂ ಶ್ರೀ ಬಸವೇಶ್ವರ ವೀರಶೈವ ಲಿಂಗಾಯುತ ಸಮಾಜಸೇವಾ ಸಂಘದ ಅಧ್ಯಕ್ಷರಾದ ಎಸ್.ಎಸ್ ಜ್ಯೋತಿಪ್ರಕಾಶ್ ಉಪಸ್ಥಿತರಿರಲಿದ್ದಾರೆ.
SUMMARY | The 3rd Sharana Sahitya Sammelana and 100th Vachana Mantapa special programme will be held in Shivamogga taluk on January 25 and 26 in association with Basava Kendra Shivamogga.
KEYWORDS | Sharana Sahitya Sammelana, programme, Basava Kendra, Shivamogg,